ವೆಂಕಾವಧೂತರ ರಥೋತ್ಸವ ಅದ್ಧೂರಿ

7

ವೆಂಕಾವಧೂತರ ರಥೋತ್ಸವ ಅದ್ಧೂರಿ

Published:
Updated:

ಕುರುಗೋಡು: ಇಲ್ಲಿಗೆ ಸಮೀಪದ ದಮ್ಮೂರು ಗ್ರಾಮದ ವೆಂಕಾವಧೂತರ ರಥೋತ್ಸವ ಬುಧವಾರ ವಿಜೃಂಭಣೆಯಿಂದ ಜರುಗಿತು. ಸಂಜೆ ಚಂದ್ರಗ್ರಹಣ ಇರುವ ಕಾರಣ ಮಧ್ಯಾಹ್ನ ರಥೋತ್ಸವ ನಡೆಯಿತು. ಶ್ರೀಮಠದಲ್ಲಿ ಬೆಳಿಗ್ಗೆಯಿಂದ ವಿಶೇಷ ಪೂಜೆ, ಧಾರ್ಮಿಕ ವಿಧಿವಿಧಾನಗಳು ಜರುಗಿದವು.

ವಿವಿಧ ಬಗೆಯ ಹೂ ಮತ್ತು ಗೊಂಬೆಗಳಿಂದ ಅಲಂಕೃತಗೊಂಡ್ದಿದ ರಥವನ್ನು ಭಕ್ತರು ಶ್ರೀಮಠದ ಆವರಣದಿಂದ ಎದುರು ಬಸವಣ್ಣ ಕಟ್ಟೆಯವರೆಗೆ ಎಳೆದೊಯ್ದು ಪುನಃ ಸ್ವಸ್ಥಾನಕ್ಕೆ ಎಳೆದು ತಂದರು. ದಮ್ಮೂರಿನ ಸುತ್ತಮುತ್ತಲಿನ ಗ್ರಾಮಗಳ ಭಕ್ತರು ಆಗಮಿಸಿದ್ದರು.

ರಥೋತ್ಸವ ಅಂಗವಾಗಿ 15 ದಿನಗಳಿಂದ ಶ್ರೀಮಠದಲ್ಲಿ ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ಪುರಾಣ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಸಾಮಾಜಿಕ ನಾಟಕ ‘ಕುರುಬ ಹಚ್ಚಿದ ಕುಂಕುಮ’ ಪ್ರದರ್ಶನಗೊಂಡಿತು. ಪಂಚಾಯ್ತಿ ವತಿಯಿಂದ ಕುಡಿಯುವ ನೀರು, ಬೀದಿ ದೀಪ ವ್ಯವಸ್ಥೆ ಮಾಡಲಾಗಿತ್ತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry