ಶುಕ್ರವಾರ, ಡಿಸೆಂಬರ್ 6, 2019
26 °C

‘ವ್ಯಾಲೆಂಟೈನ್ಸ್ ಫ್ಲೀ ಮಾರ್ಕೆಟ್

Published:
Updated:
‘ವ್ಯಾಲೆಂಟೈನ್ಸ್ ಫ್ಲೀ ಮಾರ್ಕೆಟ್

ಶಾಪಿಂಗ್ ಪ್ರಿಯರಿಗಾಗಿ ‘ವ್ಯಾಲೆಂಟೈನ್ಸ್ ವಿಶೇಷ ಫ್ಲೀ ಮಾರ್ಕೆಟ್’ ಅನ್ನು ಬೆಂಗಳೂರು ಫೆಸ್ಟಿವಲ್ ಆಯೋಜಿಸಿದೆ. ನಗರದ ಎಲ್ಲ ಶಾಪಿಂಗ್ ಪ್ರಿಯರು ಗೃಹಾಲಂಕರಣ, ಉಡುಪುಗಳು ಮತ್ತು ಶೂಗಳಿಂದ ಸ್ನಾನ ಮತ್ತು ಬಾಡಿ ಉತ್ಪನ್ನಗಳನ್ನು ಕೊಳ್ಳಬಹುದು. ಕಾರ್ಯಾಗಾರಗಳು ಮತ್ತು ಸಂಗೀತ ಕಾರ್ಯಕ್ರಮಗಳು  ಸಹ ಇರಲಿವೆ.

ಮಾಲ್‍ಗಳು ಮತ್ತು ಇತರೆ ಮಳಿಗೆಗಳಲ್ಲಿ ದೊರೆಯದ ವಿಶಿಷ್ಟ ಉತ್ಪನ್ನಗಳು, ಉಡುಗೊರೆಗಳು ಮತ್ತು ಕಲಾಕೃತಿಗಳು ಇಲ್ಲಿವೆ. ಉದ್ಯಾನದ ಅಲಂಕಾರ, ಗಿಡಗಳು, ಕುಂಡಗಳು, ಕಾರಂಜಿ, ಒಣ ಹೂವುಗಳು ಮತ್ತು ಡೈಸಿ ಕ್ರಾಫ್ಟ್ ಮತ್ತು ನೇಚರ್ಸ್ ಕ್ರಾಫ್ಟ್‌ನ  ಬಿದಿರಿನ ದೀಪಗಳು ಲಭ್ಯ. ಒಡಿಶಾದ ಸೀರೆಗಳು, ಆಭರಣ, ಗೃಹಾಲಂಕರಣ, ಅಕ್ಸೆಸರೀಸ್, ಆಕರ್ಷಕ ಫ್ಯೂಷನ್ ಉಡುಪುಗಳು, ಕ್ಲೇ ಮಾಡೆಲಿಂಗ್, ಪಾಟರಿ ಮತ್ತು ವ್ಯಾಲೆಂಟೈನ್ ಕಾರ್ಡ್ ತಯಾರಿಸುವ ಕಾರ್ಯಾಗಾರಗಳಿರುತ್ತವೆ. ಈ ಮೇಳ ಫೆಬ್ರವರಿ 2ರಿಂದ 4ರವರೆಗೆ  ಕರ್ನಾಟಕ ಚಿತ್ರಕಲಾ ಪರಿಷತ್‌ನಲ್ಲಿ ನಡೆಯಲಿದೆ.

ಸಮಯ: ಬೆಳಿಗ್ಗೆ 10.00 ರಾತ್ರಿ 8.00

ಪ್ರತಿಕ್ರಿಯಿಸಿ (+)