ಮಂಗಳವಾರ, ಡಿಸೆಂಬರ್ 10, 2019
20 °C

ಕೋಟೆಗಳ ಮಾತು, ಚಿತ್ರ

Published:
Updated:
ಕೋಟೆಗಳ ಮಾತು, ಚಿತ್ರ

ಹಿರಿಯ ಛಾಯಾಗ್ರಾಹಕ ವಿಶ್ವನಾಥ ಸುವರ್ಣ ಅವರ ‘ಕರುನಾಡ ಕೋಟೆಗಳ ಸುವರ್ಣ ನೋಟ’ ಈ ಪುಸ್ತಕದಲ್ಲಿ ರಾಜ್ಯದ ನೂರು ಕೋಟೆಗಳ ಛಾಯಾಚಿತ್ರಗಳ ಜೊತೆಗೆ ಅಪರೂಪದ ಮಾಹಿತಿಯೂ ಇದೆ.

‘ಈ ಪುಸ್ತಕ ರೂಪುಗೊಂಡಿದ್ದು ಒಂದು ರೋಚಕ ಅನುಭವ. ಪುಸ್ತಕ ರೂಪಿಸಲೆಂದು ಒಂದೂವರೆ ವರ್ಷಗಳಲ್ಲಿ ರಾಜ್ಯದ ವಿವಿಧೆಡೆ ಸಂಚರಿಸಿದೆ. ಮುದಗಲ್‌ ಕೋಟೆ ಮನಸಿಗೆ ತುಂಬಾ ಖುಷಿ ನೀಡಿತು. ಅಂತಹ ಸಣ್ಣ ಊರಿನಲ್ಲಿ ಸುಂದರ ಕೋಟೆ ಇದೆಯೆಂಬ ಊಹೆಯೂ ನನಗಿರಲಿಲ್ಲ’ ಎಂದು ಖುಷಿ ಹಂಚಿಕೊಳ್ಳುತ್ತಾರೆ ಅವರು.

‘ಶಿವಮೊಗ್ಗ ಸಮೀಪ ಕವಲೆದುರ್ಗ ಕೋಟೆಗೆ ಹೋಗಿದ್ದಾಗ ಟ್ಯಾಕ್ಸಿಯವನು ಬೆಟ್ಟದ ತುದಿಯಲ್ಲಿ ನನ್ನನ್ನು ಬಿಟ್ಟು, ‘ನೀವು ಹೋಗಿ ಸರ್‌. ನಾನಿಲ್ಲೇ ಕಾಯುತ್ತೇನೆ’ ಎಂದ. ಅಲ್ಲಿ ಪ್ರಾಣಿಗಳು ತಿನ್ನಬಹುದು ಎಂಬ ಭಯ ಅವನಿಗೆ. ನಾನೊಬ್ಬನೇ ಕ್ಯಾಮೆರಾ ಹೊತ್ತು ಮುನ್ನಡೆದೆ’ ಎಂದು ತಮ್ಮ ಪಯಣದ ಹೆಜ್ಜೆಗಳನ್ನು ಸ್ಮರಿಸುತ್ತಾರೆ.

ಪುಸ್ತಕ ಬಿಡುಗಡೆ ಸಮಾರಂಭ: ಲೋಕಾರ್ಪಣೆ– ಸಚಿವ ಎಚ್‌. ಆಂಜನೇಯ, ಅತಿಥಿಗಳು ಚಂದ್ರಶೇಖರ ಕಂಬಾರ, ಬರಗೂರು ರಾಮಚಂದ್ರಪ್ಪ, ಕೃಪಾಕರ ಸೇನಾನಿ.  ಪುಟ– 380, ಬೆಲೆ– ₹4500. ಸಂಪರ್ಕಕ್ಕೆ– 99169 77442 

ಪ್ರತಿಕ್ರಿಯಿಸಿ (+)