ಶುಕ್ರವಾರ, ಡಿಸೆಂಬರ್ 6, 2019
25 °C

ಸಹಸ್ರನಾಮದ ನಂಟು

Published:
Updated:
ಸಹಸ್ರನಾಮದ ನಂಟು

ಇಬ್ಬರು ಮಕ್ಕಳ ಉನ್ನತ ವಿದ್ಯಾಭ್ಯಾಸದ ನಡುವೆಯೇ ಹರಸಾಹಸಪಟ್ಟು ಮನೆ ಕಟ್ಟಿಸಿದೆವು. ಮನೆಗೆ ಭಿನ್ನವಾದ ಹೆಸರಿಡಬೇಕು ಎಂಬುದು ನನ್ನ ಯೋಚನೆಯಾಗಿತ್ತು. ಸ್ನೇಹಿತರು, ಬಂಧುಗಳ ಬಳಿ ಕೇಳಿದೆ. ಆದರೆ ನನಗಿಷ್ಟವಾದ ಹೆಸರನ್ನು ಅವರು ಸೂಚಿಸಲಿಲ್ಲ. ಅದೇ ಸಮಯದಲ್ಲಿ ರಾಮಕೃಷ್ಣ ಆಶ್ರಮ ಪ್ರಕಾಶನದ ವಿಷ್ಣು ಸಹಸ್ರನಾಮದ ಪುಸ್ತಕವನ್ನು ಖರೀದಿಸಿ ಅದನ್ನು ಅನೇಕ ಬಾರಿ ಪಠಿಸಿದೆ. ಅದರ ಅರ್ಥವನ್ನು ಮನನ ಮಾಡಿಕೊಂಡೆ.

ಆಗ ವಿಷ್ಣು ಸಹಸ್ರನಾಮದ 14ನೇ ಶ್ಲೋಕದ ಪ್ರಾರಂಭದಲ್ಲಿ ಬರುವ ಮತ್ತು 141 ನೇ ಸಹಸ್ರನಾಮಗಳಲ್ಲಿ ಭ್ರಾಜಿಷ್ಣು ಎಂಬ ಹೆಸರು ನಮ್ಮ ಮನೆಗೆ ಸೂಕ್ತವಾಗಿ ಕಂಡಿತು.

ಭ್ರಾಜಿಷ್ಣು ಎಂದರೆ ಅತ್ಯಂತ ಪ್ರಕಾಶಮಾನ, ಎಲ್ಲವನ್ನೂ ಧರಿಸಿದವನು ಮತ್ತು ನಮ್ಮೊಳಗಿರುವ ಕಾಮ, ಕ್ರೋಧ, ಮದ, ಮತ್ಸರ ಮುಂತಾದ ವೈರಿಗಳ ವಿರುದ್ಧ ನಮ್ಮನ್ನು ಗೆಲ್ಲಿಸುವವನು ಎಂಬ ಅರ್ಥ. ಈ ಹೆಸರು ಇಷ್ಟವಾಗಿ ಅದನ್ನೇ ಇರಿಸಿದೆ. ಗೃಹ ಪ್ರವೇಶದ ದಿನ ಮನೆಗೆ ಬಂದ ಅತಿಥಿಗಲ್ಲಿ ಅನೇಕರು ಈ ಹೆಸರಿನ ಬಗೆಗೆ ಸೋಜಿಗಪಟ್ಟರು.

–ರಾಮಕೃಷ್ಣ, ಸಿ.ಐ.ಎಲ್ ಬಡಾವಣೆ

ಪ್ರತಿಕ್ರಿಯಿಸಿ (+)