ಬ್ಯಾಂಕ್ ಅಧಿಕಾರಿ ಅಪಹರಣ: ರಕ್ಷಣೆ

7

ಬ್ಯಾಂಕ್ ಅಧಿಕಾರಿ ಅಪಹರಣ: ರಕ್ಷಣೆ

Published:
Updated:

ಶಿವಮೊಗ್ಗ: ಹಣಕ್ಕಾಗಿ ಅಪಹರಿಸಿದ್ದ ಕೆನರಾ ಬ್ಯಾಂಕ್ ಅಧಿಕಾರಿಯನ್ನು ಕೋಟೆ ಪೊಲೀಸರು ರಕ್ಷಿಸಿದ್ದಾರೆ.

ಇಲ್ಲಿನ ಬಾಲರಾಜ ಅರಸು ರಸ್ತೆಯಲ್ಲಿರುವ ಕೆನರಾ ಬ್ಯಾಂಕ್‌ನ ಶೇಷಾದ್ರಿಪುರ ಶಾಖೆಯ ಪ್ರಸನ್ನ ಸುಂದರವದನಂ ಅವರನ್ನು ಬುಧವಾರ ಬೆಳಿಗ್ಗೆ ಅಪಹರಿಸಲಾಗಿತ್ತು. ಬೆಳಿಗ್ಗೆ ಬ್ಯಾಂಕ್‌ಗೆ ಬಂದ ಅವರನ್ನು ಯುವಕನೊಬ್ಬ ಪರಿಚಿತ ಮಹಿಳೆ ನಿಮಗಾಗಿ ಕಾಯುತ್ತಿದ್ದಾರೆ ಎಂದು ಕರೆದುಕೊಂಡು ಹೋಗಿದ್ದ.

ಮೂವರು ಅವರನ್ನು ಅಪಹರಿಸಿ ₹5 ಲಕ್ಷಕ್ಕೆ ಬೇಡಿಕೆ ಇಟ್ಟಿದ್ದರು. ಸಂಜೆ ತಮ್ಮ ಮೊಬೈಲ್‌ನಿಂದ ಕರೆ ಮಾಡಿದ ಪ್ರಸನ್ನ ಅವರು ಬ್ಯಾಂಕ್ ವ್ಯವಸ್ಥಾಪಕರಿಗೆ ಹಣ ನೀಡುವಂತೆ ವಿನಂತಿಸಿದ್ದರು. ಅನುಮಾನಗೊಂಡ ವ್ಯವಸ್ಥಾಪಕರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ತಕ್ಷಣ ಪೊಲಿಸರು ತಂಡದ ಮೇಲೆ ದಾಳಿ ನಡೆಸಿದ್ದಾರೆ. ಆಗ ಆರೋಪಿಗಳು ಅಧಿಕಾರಿಯನ್ನು ಬಿಟ್ಟು ಪರಾರಿಯಾಗಿದ್ದಾರೆ.

ಕೋಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪ್ರಸನ್ನ ಆಂಧ್ರ ಪ್ರದೇಶದವರು. ಮೈಸೂರಿನ ಮಹಿಳೆ ಜತೆ ಅವರಿಗಿದ್ದ ಸಲುಗೆಯ ಮಾಹಿತಿ ಪಡೆದ ಆರೋಪಿಗಳು ಈ ಕೃತ್ಯ ಎಸಗಿದ್ದಾರೆಂದು ಪೊಲೀಸರು ತಿಳಿಸಿದ್ದಾರೆ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry