ಅಂಗವಿಕಲರಿಗೆ ಮೀಸಲಾತಿ: 5ರಿಂದ ಧರಣಿ

7

ಅಂಗವಿಕಲರಿಗೆ ಮೀಸಲಾತಿ: 5ರಿಂದ ಧರಣಿ

Published:
Updated:

ಬೆಂಗಳೂರು: ಅಂಗವಿಕಲರು ಸದೃಢ ಜೀವನ ನಡೆಸಲು ಸೂಕ್ತ ವ್ಯವಸ್ಥೆ ಕಲ್ಪಿಸುವಂತೆ ಒತ್ತಾಯಿಸಿ ಇದೇ 5ರಿಂದ ಸ್ವಾತಂತ್ರ್ಯ ಉದ್ಯಾನದಲ್ಲಿ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹ ನಡೆಸಲಾಗುವುದು ಎಂದು ಬಹುಜನ ದಲಿತ ಸಂಘರ್ಷ ಸಮಿತಿಯ ಸಂಸ್ಥಾಪಕ ಆರ್‌.ಎಂ.ಎನ್‌. ರಮೇಶ್‌ ತಿಳಿಸಿದರು.

ಗುರುವಾರ ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಅಂಗವಿಕಲರ ನಡೆ ರಾಜಕೀಯ ಮೀಸಲಾತಿಯ ಕಡೆ ಎಂಬ ಘೋಷವಾಕ್ಯದೊಂದಿಗೆ ಧರಣಿ ನಡೆಯಲಿದೆ. ದುಡಿಯುವ ಕೈಗೆ ಕೆಲಸ ಕೊಡಿ, ಇಲ್ಲವೇ ಭಿಕ್ಷೆ ಬೇಡಲು ಅನುಮತಿ ಕೊಡಿ ಎಂದು ಒತ್ತಾಯಿಸಲಾಗುವುದು ಎಂದರು.

ಅಂಗವಿಕಲರ ಘಟಕದ ಅಧ್ಯಕ್ಷ ಅಂಬಾಜಿ ಪಿ. ಮೇಟಿ ಮಾತನಾಡಿ, ‘ಅಂಗವಿಕಲರಿಗೆ ಶೇ 5ರಷ್ಟು ರಾಜಕೀಯ ಮೀಸಲಾತಿ ನೀಡಬೇಕು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಧೀನದಲ್ಲಿರುವ ಅಂಗವಿಕಲರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯನ್ನು ಪ್ರತ್ಯೇಕಗೊಳಿಸಿ, ಸ್ವತಂತ್ರ ಇಲಾಖೆ ಎಂದು ಘೋಷಿಸಬೇಕು. ರಾಜ್ಯದಾದ್ಯಂತ ಸಂಚರಿಸಲು ಉಪಯೋಗವಾಗುವಂತೆ ಅಂಗವಿಕಲರಿಗೆ ಉಚಿತ ಬಸ್ ಪಾಸ್‌ ನೀಡಬೇಕು’ ಎಂದು ಒತ್ತಾಯಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry