ಸೋಮವಾರ, ಡಿಸೆಂಬರ್ 9, 2019
22 °C

ಗುಣ ಆಗುತ್ತೆ ಅಂತ ಧೈರ್ಯ ತಗೊಂಡೆ

Published:
Updated:
ಗುಣ ಆಗುತ್ತೆ ಅಂತ ಧೈರ್ಯ ತಗೊಂಡೆ

ನನಗೆ ಆರು ವರ್ಷದ ಹಿಂದೆ ಸ್ತನ ಕ್ಯಾನ್ಸರ್‌ ಇರುವುದು ಗೊತ್ತಾಯಿತು. ಒಂದೂವರೆ ವರ್ಷಗಳ ಕಾಲ ನನಗೆ ದಿನ ಬಿಟ್ಟು ದಿನ ಜ್ವರ ಬರುತ್ತಿತ್ತು. ಡಾಕ್ಟರ್‌ ಹತ್ರ ತೋರಿಸಿದ್ದೆ. ಆದರೆ ನನಗೆ ಆಗ ಕ್ಯಾನ್ಸರ್‌ ಇರುವುದು ಗೊತ್ತಾಗಲಿಲ್ಲ.

ಬಳಿಕ ಗಡ್ಡೆ ಕಾಣಿಸಿಕೊಂಡಿತು. ಅಲ್ಲಿಂದ ಆರು ತಿಂಗಳು ಚಿಕಿತ್ಸೆ ಪಡೆದೆ. ಮೊದಲು ಭಯ ಆಗ್ತಿತ್ತು. ಗುಣವಾಗುತ್ತೆ ಅಂತ ಧೈರ್ಯ ತಗೊಂಡೆ. ಒಂದು ತಿಂಗಳು ರೇಡಿಯೇಷನ್‌ ಆಯಿತು. ಆಪರೇಷನ್‌ ಆಯಿತು. ಈಗ ಕ್ಯಾನ್ಸರ್‌ ಸಂಪೂರ್ಣ ವಾಸಿಯಾಗಿದೆ. ಕ್ಯಾನ್ಸರ್‌ ಅಂದಾಗ ಭಯ ಆಗಿತ್ತು. ಆದರೆ ಹತ್ತಿರದವರು ತುಂಬಿದ ಧೈರ್ಯ ಮತ್ತು ವೈದ್ಯರು ನೀಡಿದ ಚಿಕಿತ್ಸೆ ನನಗೆ ಸಹಜ ಬದುಕು ಕೊಟ್ಟಿತು.

-ಲೀಲಾ, ಬನಶಂಕರಿ

**

ನನ್ನ ಮಗ ಚಿರಾಗ್‌ಗೆ ಈಗ ಎಂಟು ವರ್ಷ. ಅವನಿಗೆ ಮೂರು ವರ್ಷ ಇದ್ದಾಗ ಬ್ಲಡ್‌ ಕ್ಯಾನ್ಸರ್‌ ಇರುವುದು ಗೊತ್ತಾಯಿತು. ಜ್ವರ ಬಂದಿದ್ದಾಗ ರಕ್ತ ಕಡಿಮೆ ಇದೆ ಎಂದು ಡಾಕ್ಟರ್‌ ಹೇಳಿದ್ರು. ಆಗ ರೋಗದ ಬಗ್ಗೆ ಗೊತ್ತಾಯಿತು. ವೈದ್ಯರು ಕಡಿಮೆ ಆಗುತ್ತದೆ ಎಂದು ಧೈರ್ಯ ಹೇಳಿದ್ದರು.

ಕಿದ್ವಾಯಿ ಆಸ್ಪತ್ರೆಯಲ್ಲಿ ಕಿಮೊಥೆರಪಿ, ರೇಡಿಯೇಷನ್‌ ಮಾಡಿದೆವು. ಎಲ್ಲಾ ಚಿಕಿತ್ಸೆಗೆ ಪುಟ್ಟ ಮಗು ಚೆನ್ನಾಗಿ ಸಹಕರಿಸುತ್ತಿದ್ದ. ಏನೂ ತೊಂದರೆ ಮಾಡುತ್ತಿರಲಿಲ್ಲ. ಪೂರ್ತಿ ಗುಣ ಆಗಿತ್ತು. ಈಗ ಮೂರು ತಿಂಗಳ ಹಿಂದೆ ಅವನಿಗೆ ಆರಾಮ ಇರಲಿಲ್ಲ. ಕಿದ್ವಾಯಿಗೆ ಬಂದು ವೈದ್ಯರ ಹತ್ತಿರ ತೋರಿಸಿದ್ದೇವೆ. ಕೆಲ ಪರೀಕ್ಷೆಗಳು ಬಾಕಿ ಇವೆ. ಮಗ ಪೂರ್ತಿ ಗುಣ ಆಗಬೇಕು.

-ಸಂಗೀತಾ, ಚಾಮರಾಜಪೇಟೆ

ಪ್ರತಿಕ್ರಿಯಿಸಿ (+)