ಶುಕ್ರವಾರ, ಡಿಸೆಂಬರ್ 6, 2019
23 °C

ಕರ್ನಾಟಕದ ಸರ್ಕಾರಿ ಶಾಲೆಗಳೇ ಅತ್ಯುತ್ತಮ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕರ್ನಾಟಕದ ಸರ್ಕಾರಿ ಶಾಲೆಗಳೇ ಅತ್ಯುತ್ತಮ

ನವದೆಹಲಿ: ಕರ್ನಾಟಕದಲ್ಲಿನ ಸರ್ಕಾರಿ ಮತ್ತು ಅನುದಾನಿತ ಪ್ರಾಥಮಿಕ ಶಾಲೆಗಳ ಗುಣಮಟ್ಟ ದೇಶದಲ್ಲಿಯೇ ಅತ್ಯುತ್ತಮ.

ರಾಷ್ಟ್ರೀಯ ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿ ಪರಿಷತ್‌ (ಎನ್‌ಸಿಇಆರ್‌ಟಿ) ದೇಶದ ವಿವಿಧ ಶಾಲೆಗಳಲ್ಲಿ ಕಳೆದ ನವೆಂಬರ್‌ನಲ್ಲಿ ವಿದ್ಯಾರ್ಥಿಗಳ ಸಾಮರ್ಥ್ಯ ಪರೀಕ್ಷೆ ನಡೆಸಿತ್ತು. ರಾಷ್ಟ್ರಮಟ್ಟದಲ್ಲಿ ಮೊತ್ತ ಮೊದಲ ಬಾರಿ ನಡೆದ ಕಲಿಕಾ ಮಟ್ಟ ಪರೀಕ್ಷೆಯ ತಾತ್ಕಾಲಿಕ ಫಲಿತಾಂಶ ಪ್ರಕಟವಾಗಿದೆ.

3, 5 ಮತ್ತು 8ನೇ ತರಗತಿಯ ವಿದ್ಯಾರ್ಥಿಗಳಿಗೆ ಪರೀಕ್ಷೆ ನಡೆಸಲಾಗಿತ್ತು. 3 ಮತ್ತು 5ನೇ ತರಗತಿ ಪರೀಕ್ಷೆಯಲ್ಲಿ ಕರ್ನಾ

ಟಕದ ಅತಿ ಹೆಚ್ಚು ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. 8ನೇ ತರಗತಿಯಲ್ಲಿ ಮೊದಲ ಸ್ಥಾನ ರಾಜಸ್ಥಾನದ ಪಾಲಾಗಿದೆ. ಆದರೆ ಎರಡನೇ ಸ್ಥಾನವನ್ನು ಕರ್ನಾಟಕ ಪಡೆದುಕೊಂಡಿದೆ.

ಕರ್ನಾಟಕದ ವಿದ್ಯಾರ್ಥಿಗಳ ಸಾಧನೆ ರಾಷ್ಟ್ರೀಯ ಸರಾಸರಿಗಿಂತ ಬಹಳ ಹೆಚ್ಚು ಎಂಬುದು ಗಮನಾರ್ಹವಾದ ಅಂಶ.

ಭಾಷೆ, ಗಣಿತ, ವಿಜ್ಞಾನ ಮತ್ತು ಸಮಾಜ ವಿಜ್ಞಾನ ವಿಷಯಗಳಲ್ಲಿ ವಿದ್ಯಾರ್ಥಿಗಳ ಸಾಮರ್ಥ್ಯವನ್ನು ಒರೆಗೆ ಹಚ್ಚಲಾಗಿತ್ತು. ಪ್ರತಿ ವಿಷಯದಲ್ಲಿ 15 ಪ್ರಶ್ನೆಗಳನ್ನು ಕೇಳಲಾಗಿತ್ತು. ಆಯ್ದ ಶಾಲೆಗಳಲ್ಲಿ ಈ ಪರೀಕ್ಷೆ ನಡೆದಿತ್ತು. ದೇಶದ ಒಟ್ಟು 700 ಜಿಲ್ಲೆಗಳ 1.10 ಲಕ್ಷ ವಿದ್ಯಾರ್ಥಿ

ಗಳು ಈ ಪರೀಕ್ಷೆ ಬರೆದಿದ್ದರು. ಇದು ಎರಡು ತಾಸಿನ ಪರೀಕ್ಷೆಯಾಗಿತ್ತು.

ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವ ಪ್ರಕಾಶ್‌ ಜಾವಡೇಕರ್‌ ಅವರು ಈ ಪರೀಕ್ಷೆಯ ಜಿಲ್ಲಾ ಮಟ್ಟದ ಫಲಿತಾಂಶವನ್ನು ಈಗಾಗಲೇ ಬಿಡುಗಡೆ ಮಾಡಿದ್ದಾರೆ. ಪರೀಕ್ಷೆಯ ಸಂಪೂರ್ಣ ಫಲಿತಾಂಶವನ್ನು ಮಾರ್ಚ್‌ನೊಳಗೆ ಬಿಡುಗಡೆ ಮಾಡಲು ಎನ್‌ಸಿಇಆರ್‌ಟಿ ಶ್ರಮಿಸುತ್ತಿದೆ.

ಹೆಣ್ಣು ಮಕ್ಕಳು ಮುಂದೆ: ಮೂರು ಮತ್ತು ಐದನೇ ತರಗತಿಯ ಪರೀಕ್ಷೆಯಲ್ಲಿ ಹುಡುಗರಿಗಿಂತ ಹುಡುಗಿಯರೇ ಹೆಚ್ಚಿನ ಫಲಿತಾಂಶ ಪಡೆದಿದ್ದಾರೆ. ಆದರೆ ಎಂಟನೇ ತರಗತಿಯಲ್ಲಿ ಹುಡುಗರು ಹುಡುಗಿಯರನ್ನು ಹಿಂದಿಕ್ಕಿದ್ದಾರೆ. ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳ ಸಾಧನೆ ಉತ್ತಮ

ವಾಗಿತ್ತು ಎಂದೂ ಎನ್‌ಸಿಇಆರ್‌ಟಿ ಅಧಿಕಾರಿಗಳು ತಿಳಿಸಿದ್ದಾರೆ.

ಪ್ರತಿಕ್ರಿಯಿಸಿ (+)