ಗುಡ್ಡದ ರೇಣುಕಾ ಎಲ್ಲಮ್ಮ ಜಾತ್ರೆ

7

ಗುಡ್ಡದ ರೇಣುಕಾ ಎಲ್ಲಮ್ಮ ಜಾತ್ರೆ

Published:
Updated:

ಕಾರ್ಗಲ್: ಪಟ್ಟಣದ ಬಳಿಯ ಗುಡ್ಡದ ರೇಣುಕಾ ಎಲ್ಲಮ್ಮ ದೇವಿ ಜಾತ್ರೆಗೆ ಮಹಿಳೆಯರು ಪೂರ್ಣಕುಂಭ ಸ್ವಾಗತಿಸಿ ಪಡಲಕ್ಕಿಯನ್ನು ತುಂಬಿ ‘ಉಧೋ ಉಧೋ ರೇಣುಕಾ ಎಲ್ಲಮ್ಮ ತಾಯಿ ಉಧೋ ಉಧೋ...’ ಎಂಬ ಘೋಷಣೆಗಳೊಂದಿಗೆ ಚಾಲನೆ ನೀಡಿದರು.

ವಿವಿಧ ಸಂಘ–ಸಂಸ್ಥೆಗಳು, ಸ್ತ್ರೀ ಶಕ್ತಿ ಸಂಘಟನೆಯವರು, ಸ್ವಸಹಾಯ ಒಕ್ಕೂಟದ ಸದಸ್ಯರು ದೇವಿಗೆ ಉಡಿ ಸಮರ್ಪಿಸಿದರು. ಬೆಟ್ಟದ ಮೇಲಿರುವ ಕ್ಷೇತ್ರ ಪಾಲ ನಾಗ ದೇವರ ಗುಡಿಯಲ್ಲಿ ಪೂಜೆ ಸಲ್ಲಿಸಿದರು. ದೇವಾಲಯ ಸಮಿತಿಯಿಂದ ಭಕ್ತರಿಗೆ ಸಾಮೂಹಿಕ ಅನ್ನ ಸಂತರ್ಪಣೆ ಏರ್ಪಡಿಸಲಾಗಿತ್ತು.

ಸವದತ್ತಿ ಮೂಲದ ಎಲ್ಲಮ್ಮನ ಭಕ್ತೆ ವೇದಾವತಿಯಮ್ಮ ದೈವ ದರ್ಶನದ ಮೂಲಕ ಭಕ್ತರಿಗೆ ಪ್ರಸಾದ ವಿತರಿಸಿದರು. ಗೋಧೂಳಿ ಮುಹೂರ್ತದಲ್ಲಿ ದೇವಿಯ ಉತ್ಸವ ಮೂರ್ತಿಯನ್ನು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಲಾಯಿತು.

ಈ ಬಾರಿ ಭರತ ಹುಣ್ಣಿಮೆಯಂದು ಚಂದ್ರಗ್ರಹಣ ಇದ್ದುದರಿಂದ ಜಾತ್ರೆಯನ್ನು ಒಂದು ದಿನ ಮುಂದೂಡಲಾಗಿತ್ತು. ಮೂರು ದಿನಗಳ ಕಾಲ ನಡೆಯುವ ಜಾತ್ರಾಮಹೋತ್ಸವದಲ್ಲಿ ಭಕ್ತರು ಸಹಕಾರ ನೀಡಬೇಕು ಎಂದು ಧರ್ಮದರ್ಶಿ ಗಣಪತಿ ಕಾಮತ್ ಸಿರಿವಂತೆ ಮನವಿ ಮಾಡಿದ್ದಾರೆ. ಸಮಿತಿ ಅಧ್ಯಕ್ಷ ಕೆ.ವಿ. ನಾಗೇಶ್, ಕಾರ್ಯದರ್ಶಿ ಟಿ.ಸುರೇಶ್, ಖಜಾಂಚಿ ಎಚ್. ರವಿ ಉಪಸ್ಥಿತರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry