ಭಾನುವಾರ, ಡಿಸೆಂಬರ್ 8, 2019
24 °C

19 ವರ್ಷದೊಳಗಿನವರ ವಿಶ್ವಕಪ್ ಕ್ರಿಕೆಟ್‌ ಫೈನಲ್: ಭಾರತಕ್ಕೆ ಉತ್ತಮ ಆರಂಭ

Published:
Updated:
19 ವರ್ಷದೊಳಗಿನವರ ವಿಶ್ವಕಪ್ ಕ್ರಿಕೆಟ್‌ ಫೈನಲ್: ಭಾರತಕ್ಕೆ ಉತ್ತಮ ಆರಂಭ

ಮೌಂಟ್‌ ಮೌಂಗನೂಯಿ, ನ್ಯೂಜಿಲೆಂಡ್‌: ಇಲ್ಲಿನ ಬೇ ಓವಲ್‌ ಮೈದಾನದಲ್ಲಿ ನಡೆಯುತ್ತಿರುವ, ಮಳೆಯಿಂದಾಗಿ ಸ್ಥಗಿತಗೊಂಡಿದ್ದ 19 ವರ್ಷದೊಳಗಿನವರ ವಿಶ್ವಕಪ್ ಕ್ರಿಕೆಟ್‌ ಫೈನಲ್ ಪಂದ್ಯ ಮತ್ತೆ ಆರಂಭವಾಗಿದೆ.

ಮೊದಲ 15 ಓವರ್‌ಗಳಲ್ಲಿ ಭಾರತ ತಂಡ ಒಂದು ವಿಕೆಟ್ ನಷ್ಟಕ್ಕೆ 97 ರನ್ ಗಳಿಸಿದೆ.

217 ರನ್‌ ಗುರಿ ಬೆನ್ನತ್ತಿರುವ ಭಾರತ ತಂಡಕ್ಕೆ ಉತ್ತಮ ಆರಂಭ ದೊರೆತಿದೆ. ಆರಂಭಿಕ ಆಟಗಾರ ಮನ್‌ಜೋತ್ ಕಾಲ್ರಾ (42), ಶಬ್ಮಾನ್ ಗಿಲ್ (14) ರನ್ ಗಳಿಸಿ ಆಡುತ್ತಿದ್ದಾರೆ. ನಾಯಕ ಪೃಥ್ವಿ ಶಾ 29 ರನ್‌ ಗಳಿಸಿ ಔಟ್ ಆಗಿದ್ದಾರೆ.

ಪ್ರತಿಕ್ರಿಯಿಸಿ (+)