ತಾನಾಗೇ ಸಿಕ್ಕ ಕಳ್ಳ

ಬರ್ಲಿನ್‌ನ ಕಳ್ಳನೊಬ್ಬ ಕದ್ದ ಬಟ್ಟೆಯನ್ನೇ ತೊಟ್ಟು, ಅದೇ ಬಟ್ಟೆ ಅಂಗಡಿಗೆ ತೆರಳಿದಾಗ ಸಿಕ್ಕಿಬಿದ್ದ.
ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ 20 ವರ್ಷದ ಯುವಕ ಒಂದು ಜೊತೆ ಬಟ್ಟೆ ಎಗರಿಸಿದ.
ಆಮೇಲೆ ಜ್ಞಾನೋದಯವಾಗಿ, ತಪ್ಪೊಪ್ಪಿಕೊಳ್ಳಲೆಂದು ಎರಡು ದಿನಗಳ ನಂತರ ಅಂಗಡಿಗೆ ತೆರಳಿದ. ಮಾಲೀಕ ಷೂಗಳು ಹಾಗೂ ಜಾಕೆಟ್ ನೋಡಿ ಕದ್ದವನು ಅವನೇ ಎಂದು ಪತ್ತೆಹಚ್ಚಿದರು. ಆ ಷೂ ಹಾಗೂ ಜಾಕೆಟ್ ಸಿಗುತ್ತಿದ್ದುದು ಅವರ ಅಂಗಡಿಯಲ್ಲಿ ಮಾತ್ರ.
**
ಫ್ರಿದಾ ನೋಡಿ ಜನ ಫಿದಾ
ಫ್ರಿದಾ ಎಂಬ ರಕ್ಷಣಾ ನಾಯಿ ಮೆಕ್ಸಿಕೊದಲ್ಲಿ ನ್ಯಾಷನಲ್ ಹೀರೊ ಆಯಿತು. ಏಳು ವರ್ಷದ ಲ್ಯಾಬ್ರಡಾರ್ ರಿಟ್ರೀವರ್ ತಳಿಯ ಈ ನಾಯಿ ಮೆಕ್ಸಿಕನ್ ನೌಕಾದಳಕ್ಕೆ ಸೇರಿದ್ದು. ಎರಡು ಭೂಕಂಪಗಳಾದಾಗ ಅವಶೇಷಗಳಡಿ ಸಿಲುಕಿದ ಅಸಂಖ್ಯ ಜನರನ್ನು ಈ ನಾಯಿ ರಕ್ಷಿಸಿತ್ತು. ರಕ್ಷಣಾ ಕನ್ನಡಕ, ಬೂಟು ಹಾಗೂ ಖಾಕಿ ತೊಟ್ಟ ಈ ನಾಯಿಯ ವಿಡಿಯೊಗಳು ಸಾಮಾಜಿಕ ಜಾಲತಾಣದಲ್ಲೂ ಜನಪ್ರಿಯವಾದವು.
ಪ್ರತಿಕ್ರಿಯಿಸಿ (+)