ಬುಧವಾರ, ಡಿಸೆಂಬರ್ 11, 2019
20 °C

ಒಂದು ರೂಪಾಯಿಗಾಗಿ ಕೊಲೆ

ಪಿಟಿಐ Updated:

ಅಕ್ಷರ ಗಾತ್ರ : | |

ಒಂದು ರೂಪಾಯಿಗಾಗಿ ಕೊಲೆ

ಠಾಣೆ: ಇಲ್ಲಿನ ಕಲ್ಯಾಣ್‌ ಟೌನ್‌ನಲ್ಲಿ ಒಂದು ರೂಪಾಯಿಗಾಗಿ ನಡೆದ ಜಗಳ ವ್ಯಕ್ತಿಯೊಬ್ಬನ ಹತ್ಯೆಯಲ್ಲಿ ಅಂತ್ಯವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಶುಕ್ರವಾರ ರಾತ್ರಿ 54 ವರ್ಷದ ಮನೋಹರ್‌ ಗುಮ್ನೆ ರಾಮ್‌ಬಾಗ್‌ನ ಅಂಗಡಿಯೊಂದಕ್ಕೆ ಮೊಟ್ಟೆ ಖರೀದಿಸಲು ಹೋಗಿದ್ದಾನೆ. ನೀಡಬೇಕಿರುವುದಕ್ಕಿಂತ  ಒಂದು ರೂಪಾಯಿ ಕಡಿಮೆ ನೀಡಿದ್ದಾನೆ. ಆ ಕಾರಣಕ್ಕೆ ಅಂಗಡಿಯ ಮಾಲೀಕ ಜಗಳ ಮಾಡಿ, ಗುಮ್ನೆಯನ್ನು ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದಾನೆ.

ನಂತರ ಗುಮ್ನೆ ಮತ್ತು ಆತನ ಪುತ್ರ ಮತ್ತೆ ಅಂಗಡಿಯ ಬಳಿ ಹೋಗಿ ಪ್ರಶ್ನೆ ಮಾಡಿದ್ದಾರೆ. ಆಗ ಮಾಲೀಕನ ಮಗ ಗುಮ್ನೆ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದ್ದಾನೆ. ಇದು ಸಾವಿಗೆ ಕಾರಣವಾಗಿದೆ’ ಎಂದು ಠಾಣೆ ಪೊಲೀಸ್‌ ಪಿಆರ್‌ಒ ಸುಖದ ನರ್ಕರ್‌ ಹೇಳಿದ್ದಾರೆ.  

ಆರೋಪಿ ಸುಧಾಕರ್‌ ಪ್ರಭುವನ್ನು ಬಂಧಿಸಿ ಕೊಲೆ ದೂರು ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರತಿಕ್ರಿಯಿಸಿ (+)