ಗುರುವಾರ , ಡಿಸೆಂಬರ್ 12, 2019
25 °C

‘ಕೆಲಸ ಮಾಡದ ಆಯುಷ್‌ ಸಚಿವಾಲಯ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

‘ಕೆಲಸ ಮಾಡದ ಆಯುಷ್‌ ಸಚಿವಾಲಯ’

ಬಳ್ಳಾರಿ: ‘ಯೋಗದ ಮಹತ್ವವನ್ನು ದೇಶದಾದ್ಯಂತ ಸಾರಬೇಕಾದ ಕೇಂದ್ರದ ಆಯುಷ್‌ ಸಚಿವಾಲಯ ನಿರೀಕ್ಷೆಯಂತೆ ಕೆಲಸ ಮಾಡುತ್ತಿಲ್ಲ’ ಎಂದು ಯೋಗ ಗುರು ಬಾಬಾ ರಾಮದೇವ್‌ ಶನಿವಾರ ಇಲ್ಲಿ ಅಸಮಾಧಾನ ವ್ಯಕ್ತಪಡಿಸಿದರು.

ಸಚಿವಾಲಯದ ಅಧಿಕಾರಿಗಳು ಸುಮ್ಮನೇ ಕುಳಿತುಕೊಳ್ಳುವುದಾದರೆ ಅಂಥ ಸಚಿವಾಲಯ ಇರಬೇಕಾಗಿಲ್ಲ ಎಂದು ಅಭಿಪ್ರಾಯಪಟ್ಟ ಅವರು, ‘ಪ್ರಧಾನಿ ಮೋದಿ ಬಯಸಿದರೆ ಪತಂಜಲಿ ಯೋಗ ಸಮಿತಿಯು ಸಚಿವಾಲಯಕ್ಕೆ ಉಚಿತವಾಗಿ ಸಲಹೆ, ಮಾರ್ಗದರ್ಶನ ನೀಡುತ್ತದೆ. ಆ ಮೂಲಕವಾದರೂ ಯೋಗವನ್ನು ಜನಪ್ರಿಯಗೊಳಿಸುವ ಆಂದೋಲನವನ್ನು ಗಟ್ಟಿಗೊಳಿಸಬಹುದು’ ಎಂದು ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಪ್ರತಿಕ್ರಿಯಿಸಿ (+)