ಸೋಮವಾರ, ಡಿಸೆಂಬರ್ 9, 2019
21 °C
ರಾಷ್ಟ್ರೀಯ ಸಬ್‌ ಜೂನಿಯರ್‌ ನೆಟ್‌ಬಾಲ್‌ ಚಾಂಪಿಯನ್‌ಷಿಪ್‌

ಕರ್ನಾಟಕದ ತಂಡಗಳಿಗೆ ಬೆಳ್ಳಿ

Published:
Updated:
ಕರ್ನಾಟಕದ ತಂಡಗಳಿಗೆ ಬೆಳ್ಳಿ

ಬೆಂಗಳೂರು: ಕರ್ನಾಟಕದ ಬಾಲಕರ ಮತ್ತು ಬಾಲಕಿಯರ ತಂಡದವರು ಬಿಹಾರದಲ್ಲಿ ನಡೆದ 23ನೇ ರಾಷ್ಟ್ರೀಯ ಸಬ್‌ ಜೂನಿಯರ್‌ ನೆಟ್‌ಬಾಲ್‌ ಚಾಂಪಿಯನ್‌ಷಿಪ್‌ನಲ್ಲಿ ಬೆಳ್ಳಿ ಪದಕಗಳನ್ನು ಗೆದ್ದುಕೊಂಡಿದ್ದಾರೆ.

ಬಾಲಕಿಯರ ವಿಭಾಗದ ಫೈನಲ್‌ನಲ್ಲಿ ಕರ್ನಾಟಕ ತಂಡ 28–44 ಪಾಯಿಂಟ್ಸ್‌ನಿಂದ ಹರಿಯಾಣ ತಂಡದ ಎದುರು ಪರಾಭವಗೊಂಡಿತು.

ಇದಕ್ಕೂ ಮುನ್ನ ನಡೆದಿದ್ದ ಸೆಮಿಫೈನಲ್‌ನಲ್ಲಿ ರಾಜ್ಯ ತಂಡದವರು 31–5ರಿಂದ ಗುಜರಾತ್‌ ತಂಡದ ಎದುರು ಗೆದ್ದಿದ್ದರು.

ಕರ್ನಾಟಕದ ಬಾಲಕರ ತಂಡದವರು ಪ್ರಶಸ್ತಿ ಸುತ್ತಿನಲ್ಲಿ 26–36 ಪಾಯಿಂಟ್ಸ್‌ನಿಂದ ಹರಿಯಾಣ ತಂಡಕ್ಕೆ ಶರಣಾದರು.

ನಾಲ್ಕರ ಘಟ್ಟದ ಹೋರಾಟದಲ್ಲಿ ರಾಜ್ಯ ತಂಡ 36–12ರಿಂದ ಗುಜರಾತ್‌ ತಂಡಕ್ಕೆ ಸೋಲುಣಿಸಿತ್ತು. ರಾಜ್ಯ ತಂಡ ಎಲ್ಲಾ ವಿಭಾಗಗಳಲ್ಲೂ ಮಿಂಚಿತು.

ಪ್ರತಿಕ್ರಿಯಿಸಿ (+)