ಭಾನುವಾರ, ಡಿಸೆಂಬರ್ 8, 2019
24 °C

ಸಂಚಾರ ದಟ್ಟಣೆ ಸಾಧ್ಯತೆ; ಮಾರ್ಗ ಬದಲಾವಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸಂಚಾರ ದಟ್ಟಣೆ ಸಾಧ್ಯತೆ; ಮಾರ್ಗ ಬದಲಾವಣೆ

ಬೆಂಗಳೂರು: ಪರಿವರ್ತನಾ ರ‍್ಯಾಲಿ ಸಮಾರೋಪ ಸಮಾರಂಭದ ಪ್ರಯುಕ್ತ ನಗರದ ಸಂಚಾರ ವ್ಯವಸ್ಥೆಯಲ್ಲಿ ಬದಲಾವಣೆ ಮಾಡಲಾಗಿದೆ.

ಹೊರ ಜಿಲ್ಲೆಗಳಿಂದ ಜನರನ್ನು ಕರೆತರುವ ವಾಹನಗಳಿಗೆ ಸರ್ಕಸ್‌ ಮೈದಾನ ಹಾಗೂ ಮಾವಿನಕಾಯಿ ಮಂಡಿ ಆವರಣದಲ್ಲಿ ನಿಲುಗಡೆಗೆ ವ್ಯವಸ್ಥೆ ಮಾಡಲಾಗಿದೆ. ಮೈದಾನದಲ್ಲಿರುವ ಗೋಕಾರ್ಟಿಂಗ್ ಕ್ಲಬ್‌ ಆವರಣದಲ್ಲಿ ದ್ವಿಚಕ್ರ ವಾಹನಗಳನ್ನು ನಿಲುಗಡೆ ಮಾಡಬಹುದು. ಬೇರೆಡೆ ನಿಲ್ಲಿಸುವ ವಾಹನಗಳನ್ನು ಪೊಲೀಸರು ಟೋಯಿಂಗ್‌ ಮಾಡಲಿದ್ದಾರೆ.

ವೇದಿಕೆಯಲ್ಲಿ ಕುಳಿತುಕೊಳ್ಳಲಿರುವ 27 ಗಣ್ಯ ವ್ಯಕ್ತಿಗಳು, ತಮ್ಮ ಕಾರುಗಳನ್ನು ರಮಣಮಹರ್ಷಿ ರಸ್ತೆಯ ಸರ್ವೀಸ್ ರಸ್ತೆಯಲ್ಲಿರುವ ಗೇಟ್ ನಂ. 2ರ ಮೂಲಕ ತಂದು ತ್ರಿಪುರವಾಸಿನಿ ಮೈದಾನದಲ್ಲಿ ನಿಲ್ಲಿಸಬಹುದು. ವಿವಿಐಪಿ ಪಾಸ್ ಹೊಂದಿರುವ 1,500 ಮಂದಿ, ವಸಂತನಗರದ ಕೆಳಸೇತುವೆ ಮೂಲಕ ಅರಮನೆ ಮೈದಾನ ಪ್ರವೇಶಿಸಿ ಮುಖ್ಯ ಮೈದಾನದಲ್ಲಿ ಕಾರು ನಿಲುಗಡೆ ಮಾಡಬಹುದು.

ವಾಹನಗಳ ನಿಲುಗಡೆ ನಿಷೇಧ: ಬೆಳಿಗ್ಗೆ 6 ಗಂಟೆಯಿಂದ ಸಂಜೆ 8ರ ವರೆಗೆ ರಮಣ ಮಹರ್ಷಿ ರಸ್ತೆ, ಸರ್.ಸಿ.ವಿ ರಾಮನ್ ರಸ್ತೆ, ಬಳ್ಳಾರಿ ರಸ್ತೆ, ಹೆಬ್ಬಾಳ ಮೇಲ್ಸೇತುವೆ, ಎಚ್.ಕ್ಯೂ.ಟಿ.ಸಿ, ಮೇಖ್ರಿ ವೃತ್ತ, ಜಯಮಹಲ್ ರಸ್ತೆ, ತರಳಬಾಳು ರಸ್ತೆ, ಎಂ.ವಿ ಜಯರಾಮನ್ ರಸ್ತೆ, ಅರಮನೆ ರಸ್ತೆ, ಅರಮನೆ ಕ್ರಾಸ್ ರಸ್ತೆ, ಆರ್.ಟಿ.ನಗರ ಮುಖ್ಯ ರಸ್ತೆ, ವಾಟರ್ ಟ್ಯಾಂಕ್ ಜಂಕ್ಷನ್, ಪಿ.ಆರ್.ಟಿ.ಸಿ. ಜಂಕ್ಷನ್, ಹಳೆ ವಿಮಾನ ನಿಲ್ದಾಣ ರಸ್ತೆ,  ಕಬ್ಬನ್ ರಸ್ತೆ, ಚಾಲುಕ್ಯ ವೃತ್ತದಲ್ಲಿ ಎಲ್ಲ ಮಾದರಿ ವಾಹನಗಳ ನಿಲುಗಡೆ ನಿಷೇಧಿಸಲಾಗಿದೆ.‌

ಬಸ್‌ ಸಂಚಾರಕ್ಕೆ ಪ್ರತ್ಯೇಕ ಮಾರ್ಗ: ಮೈಸೂರು ಕಡೆಯಿಂದ ಬರುವ ಬಸ್‌ಗಳು ನಾಯಂಡನಹಳ್ಳಿ, ಸುಮನಹಳ್ಳಿ, ರಾಜ್‌ಕುಮಾರ್‌ ಸ್ಮಾರಕ, ತುಮಕೂರು ರಸ್ತೆ, ಗೊರಗುಂಟೆಪಾಳ್ಯ ಜಂಕ್ಷನ್, ಬಿ.ಇ.ಎಲ್, ಹೆಬ್ಬಾಳ ಮೇಲ್ಸೇತುವೆ, ಮೇಖ್ರಿ ವೃತ್ತ, ಜಯಮಹಲ್‌ ರಸ್ತೆ ಮೂಲಕ ಸರ್ಕಸ್‌ ಮೈದಾನ ಹಾಗೂ ಮಾವಿನಕಾಯಿ ಮಂಡಿ ಆವರಣಕ್ಕೆ ಬರಬಹುದು.

ತುಮಕೂರು ರಸ್ತೆ ಮೂಲಕ ಬರುವ ಬಸ್‌ಗಳು ಗೊರಗುಂಟೆಪಾಳ್ಯ ಜಂಕ್ಷನ್, ಬಿ.ಇ.ಎಲ್, ಹೆಬ್ಬಾಳ ಮೇಲ್ಸೇತುವೆ, ಮೇಖ್ರಿ ವೃತ್ತ ಸರ್ವೀಸ್‌ ರಸ್ತೆ, ಜಯಮಹಲ್‌ ರಸ್ತೆ ಮೂಲಕ ಮೈದಾನ ಪ್ರವೇಶಿಸಬಹುದು.

ಕನಕಪುರ ರಸ್ತೆಯಿಂದ ಬರುವ ಬಸ್‌ಗಳು ಬನಶಂಕರಿ ದೇವಸ್ಥಾನ ಬಸ್‌ ನಿಲ್ದಾಣ, ರಾಜಲಕ್ಷ್ಮಿ ಜಂಕ್ಷನ್, ಜಯನಗರ 4ನೇ ಮುಖ್ಯರಸ್ತೆ, ಸೌತ್‌ ಎಂಡ್‌ ವೃತ್ತ, ಆರ್‌.ವಿ. ಜಂಕ್ಷನ್, ಲಾಲ್‌ಬಾಗ್ ಪಶ್ಚಿಮ ಗೇಟ್‌, ಮಿನರ್ವ ವೃತ್ತ, ಜೆ.ಸಿ.ರಸ್ತೆ, ಪುರಭವನ, ಕೆ.ಜಿ.ರಸ್ತೆ, ಮೈಸೂರು ಬ್ಯಾಂಕ್‌ ವೃತ್ತ, ಅರಮನೆ ರಸ್ತೆ, ಬಸವೇಶ್ವರ ವೃತ್ತ, ಹಳೇ ಹೈಗ್ರೌಂಡ್ಸ್‌ ಜಂಕ್ಷನ್‌,  ಚಂದ್ರಿಕಾ ಜಂಕ್ಷನ್, ಕಂಟೋನ್ಮೆಂಟ್‌ ಕೆಳಸೇತುವೆ, ಜಯಮಹಲ್‌ ರಸ್ತೆ ಮೂಲಕ ಬರಬಹುದು.

ಹೊಸೂರು ಕಡೆಯಿಂದ ಬರುವ ಬಸ್‍ಗಳು ಮಡಿವಾಳ ಚೆಕ್‍ಪೋಸ್ಟ್, ಡೈರಿ ವೃತ್ತ, ಕೆ.ಎಚ್.ವೃತ್ತ, ಲಾಲ್‍ಬಾಗ್ ಮುಖ್ಯದ್ವಾರ, ಮಿನರ್ವ ವೃತ್ತ, ಜೆ.ಸಿ.ರಸ್ತೆ, ಪುರಭವನ, ಕೆ.ಜಿ.ರಸ್ತೆ, ಮೈಸೂರು ಬ್ಯಾಂಕ್ ವೃತ್ತ,ಅರಮನೆ ರಸ್ತೆ, ಬಸವೇಶ್ವರ ವೃತ್ತ, ಹಳೇ ಹೈಗ್ರೌಂಡ್ಸ್ ಜಂಕ್ಷನ್, ಕಂಟೋನ್ಮೆಂಟ್ ಕೆಳಸೇತುವೆ, ಜಯಮಹಲ್ ರಸ್ತೆ ಮೂಲಕ ಮೈದಾನ ತಲುಪಬೇಕು.

ಹಳೆ ಮದ್ರಾಸ್ ರಸ್ತೆ ಕಡೆಯಿಂದ ಬರುವ ಬಸ್‍ಗಳು ಕೆ.ಆರ್.ಪುರ ತೂಗುಸೇತುವೆ, ಹೆಣ್ಣೂರು ಜಂಕ್ಷನ್, ನಾಗವಾರ, ಹೆಬ್ಬಾಳ ಮೇಲ್ಸೇತುವೆ, ಬಳ್ಳಾರಿ ರಸ್ತೆ, ಮೇಖ್ರಿ ವೃತ್ತ ಸರ್ವೀಸ್ ರಸ್ತೆ ಜಯಮಹಲ್ ರಸ್ತೆ ಮೂಲಕ ಬರಬೇಕು.

ಬಳ್ಳಾರಿ ರಸ್ತೆ ಕಡೆಯಿಂದ ಬರುವ ಬಸ್‍ಗಳು ದೇವನಹಳ್ಳಿ, ಚಿಕ್ಕಜಾಲ, ಹುಣಸಮಾರನಳ್ಳಿ, ಕೋಗಿಲು ಜಂಕ್ಷನ್, ಕೊಡಿಗೇಹಳ್ಳಿ ಗೇಟ್, ಹೆಬ್ಬಾಳ ಮೇಲ್ಸೇತುವೆ, ಮೇಖ್ರಿ ವೃತ್ತ ಸರ್ವೀಸ್ ರಸ್ತೆ, ಜಯಮಹಲ್ ರಸ್ತೆ ಮೂಲಕ ಬರಬಹುದು.

ದೊಡ್ಡಬಳ್ಳಾಪುರ ಕಡೆಯಿಂದ ಬರುವ ಬಸ್‍ಗಳು ಮೇಜರ್ ಉನ್ನಿಕೃಷ್ಣ ರಸ್ತೆ ಜಂಕ್ಷನ್, ಯಲಹಂಕ ಪೊಲೀಸ್ ಠಾಣೆ ಜಂಕ್ಷನ್, ಯಲಹಂಕ್ ಬೈಪಾಸ್ ಜಂಕ್ಷನ್, ಬಳ್ಳಾರಿ ರಸ್ತೆ, ಹೆಬ್ಬಾಳ ಮೇಲ್ಸೇತುವೆ, ಮೇಖ್ರಿ ವೃತ್ತ ಸರ್ವೀಸ್ ರಸ್ತೆ, ಜಯಮಹಲ್ ರಸ್ತೆ ಮೂಲಕ ಮೈದಾನಕ್ಕೆ ಬರಬಹುದು.

ನಾಯಿ ಹಾವು ಹಿಡಿಯಲು ಪತ್ರ

ಬೆಂಗಳೂರು: ನರೇಂದ್ರ ಮೋದಿ ಅವರ ಸಂಚಾರಕ್ಕೆ ಅಡ್ಡಿಯಾಗಬಾರದೆಂಬ ಕಾರಣಕ್ಕೆ ವಿಮಾನ ನಿಲ್ದಾಣದ ಸುತ್ತಮುತ್ತಲ ಬೀದಿನಾಯಿಗಳ ಹಾಗೂ ಹಾವುಗಳನ್ನು ಹಿಡಿಯುವಂತೆ ಬಿಬಿಎಂಪಿ ಅಧಿಕಾರಿಗಳಿಗೆ ಪೊಲೀಸರು ಪತ್ರ ಬರೆದಿದ್ದಾರೆ.

ನಿಲ್ದಾಣಕ್ಕೆ ಬೆಳಿಗ್ಗೆ ವಿಮಾನದಲ್ಲಿ ಬರುವ ಮೋದಿ, ಅಲ್ಲಿಂದ ಸಮಾವೇಶ ನಡೆಯುವ ಅರಮನೆ ಮೈದಾನಕ್ಕೆ ರಸ್ತೆ ಮೂಲಕ ಹೋಗಲಿದ್ದಾರೆ. ಈ ಭಾಗದಲ್ಲಿ ಬೀದಿನಾಯಿ ಹಾಗೂ ಹಾವುಗಳ ಕಾಟ ಜಾಸ್ತಿ ಇದೆ. ಹೀಗಾಗಿಯೇ ಎಚ್‌ಎಎಲ್‌ ಠಾಣೆಯ ಇನ್‌ಸ್ಪೆಕ್ಟರ್‌, ಬಿಬಿಎಂಪಿ ಅರಣ್ಯ ವಿಭಾಗದ ಅಧಿಕಾರಿಗಳಿಗೆ ಪತ್ರ ಬರೆದಿದ್ದಾರೆ.

‘ಪ್ರಧಾನಿ ಅವರು ಅರಮನೆ ಮೈದಾನ ತಲುಪುವವರೆಗೂ ಭದ್ರತೆ ನೀಡುವ ಜವಾಬ್ದಾರಿ ನನಗಿದೆ. ಅದಕ್ಕಾಗಿ ಕಳೆದೆರಡು ದಿನದಿಂದ ಎಚ್‌ಎಎಲ್‌ ವಿಮಾನ ನಿಲ್ದಾಣದಲ್ಲಿ ಪರಿಶೀಲನೆ ನಡೆಸುತ್ತಿದ್ದೇವೆ. ವಿಶಾಲವಾದ ನಿಲ್ದಾಣದ ಜಾಗದಲ್ಲಿ ನಾಯಿಗಳು, ಹಾವುಗಳು ಹೆಚ್ಚಿರುವುದನ್ನು ಕಂಡಿದ್ದೇನೆ. ಭದ್ರತೆ ದೃಷ್ಟಿಯಿಂದ ಅವುಗಳನ್ನು ನೀವು(ಬಿಬಿಎಂಪಿ) ಹಿಡಿಯಬೇಕು’ ಎಂದು ಪತ್ರದಲ್ಲಿ ಇನ್‌ಸ್ಪೆಕ್ಟರ್‌ ಬರೆದಿದ್ದಾರೆ.

***

ಸಮಾರಂಭ ನಡೆಯುವ ಸ್ಥಳದಲ್ಲಿ ಯಾವುದೇ ಪ್ರತಿಭಟನೆಗೆ ಅವಕಾಶವಿಲ್ಲ. ಯಾರಾದರೂ ಪ್ರತಿಭಟನೆಗೆ ಯತ್ನಿಸಿದರೆ ವಶಕ್ಕೆ ಪಡೆಯಲಿದ್ದೇವೆ

– ಟಿ.ಸುನೀಲ್‌ಕುಮಾರ್, ಪೊಲೀಸ್‌ ಕಮಿಷನರ್‌

ಪ್ರತಿಕ್ರಿಯಿಸಿ (+)