7

ಸೌಹಾರ್ದತೆಗಾಗಿ ಬೃಹತ್ ಮಾನವ ಸರಪಳಿ

Published:
Updated:

ದಾಂಡೇಲಿ: ಸೌಹಾರ್ದ ಕರ್ನಾಟಕ ಮಾನವ ಸರಪಳಿ ಕಾರ್ಯಕ್ರಮದಲ್ಲಿ ನಗರದ ಪ್ರೌಢಶಾಲೆ, ಕಾಲೇಜು ವಿದ್ಯಾರ್ಥಿಗಳು ಹಾಗೂ ನಾಗರಿಕರು ಮಾನವ ಸರಪಳಿ ನಿರ್ಮಿಸಿ, ಸೌಹಾರ್ದತೆಯ ಪ್ರತಿಜ್ಞೆ ಸ್ವೀಕರಿಸಿದರು.

ಸೋಮಾನಿ ವೃತ್ತದ ಬಳಿ ನಗರಸಭೆ ಅಧ್ಯಕ್ಷ ನಾಗೇಶ ಸಾಳುಂಕೆ ಅವರು ಮಹಾತ್ಮ ಗಾಂಧೀಜಿ ಭಾವಚಿತ್ರಕ್ಕೆ ನಮನ ಸಲ್ಲಿಸಿ ಮಾನವ ಸರಪಳಿಗೆ ಚಾಲನೆ ನೀಡಿದರು. ಬಂಗೂರನಗರ ಪದವಿ ಕಾಲೇಜಿನಿಂದ ಆರಂಭಗೊಂಡ ಮಾನವ ಸರಪಳಿ, ಬರ್ಚಿ ರಸ್ತೆ, ಸೋಮಾನಿ ವೃತ್ತ, ಜೆ.ಎನ್. ರಸ್ತೆ, ಲಿಂಕ್ ರಸ್ತೆಯ ಮೂಲಕ ಹಾದು ಕಿತ್ತೂರ ಚನ್ನಮ್ಮ ವೃತ್ತದ ಬಳಿ ಅಂತ್ಯಗೊಂಡಿತು.

ಕಿತ್ತೂರ ಚನ್ನಮ್ಮ ವೃತ್ತದ ಬಳಿ ಮೂರು ಸುತ್ತಿನಲ್ಲಿ ಮಾನವ ಸರಪಳಿ ನಡೆಸಿದ ವಿದ್ಯಾರ್ಥಿಗಳು ಸೌಹಾರ್ದ ಕರ್ನಾಟಕವನ್ನು ಗಟ್ಟಿಗೊಳಿಸುವ ಹಾಗೂ ಸರ್ವ ಜನಾಂಗದ ಶಾಂತಿಯ ತೋಟದ ಆಶಯವನ್ನು ಪಾಲಿಸುವ ಪ್ರತಿಜ್ಞೆ ಮಾಡಿದರು.

ಸೌಹಾರ್ದ ಕರ್ನಾಟಕ ಸಿದ್ದತಾ ಸಮಿತಿಯ ಹರೀಶ್ ನಾಯ್ಕ, ಯು.ಎಸ್.ಪಾಟೀಲ್, ಐ.ಪಿ. ಘಟಕಾಂಬಳೆ, ಬಿ.ಎನ್. ವಾಸರೆ, ಡಿ. ಸ್ಯಾಮಸನ್, ಅಕ್ರಮ ಖಾನ್, ಎಸ್.ಎಸ್. ಪೂಜಾರ್, ನಗರಸಭೆ ಮಾಜಿ ಅಧ್ಯಕ್ಷ ತಸ್ವರ ಸೌದಾಗರ್ ನಗರಸಭಾ ಸದಸ್ಯರಾದ ಅನಿಲ್ ದಂಡಗಲ್, ಕೀರ್ತಿ ಗಾಂವಕರ, ಅಷ್ಪಾಕ ಶೇಖ, ರಿಯಾಜ ಶೇಖ, ರೋಶನ್ ಬಾವಾಜಿ, ಲಿಯಾಖತ್ ಖಾನಾಪುರಿ, ಸುಶೀಲಾ ಕಾಸರ್‌ಕೋಡ, ನಮಿತಾ ಹಳದನಕರ್ ಪತ್ರಕರ್ತ ಬಿ.ಪಿ.ಮಹೇಂದ್ರಕುಮಾರ್, ಪ್ರಮುಖರಾದ ದಾದಾಫೀರ್ ಮುಲ್ಲಾ, ಅಬ್ದುಲ್ ಮಜೀದ್ ಸನದಿ, ಹನುಮಂತ ಕುಂಬಾರ, ಬಿಜು ನಾಯ್ಕ, ಉದ್ದಂಡಿ, ಎ.ಎಂ.ಜಾಫರ್, ರಾಹುಲ್ ಬಾವಾಜಿ, ಎಸ್.ಎಸ್.ಕುರ್ಡೆಕರ, ಡುಮೆಲ್ಲೋ ಫರ್ನಾಂಡೀಸ್ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry