ಮಾಲ್ಡೀವ್ಸ್‌ನಲ್ಲಿ 15 ದಿನಗಳ ತುರ್ತು ಪರಿಸ್ಥಿತಿ ಘೋಷಣೆ

7

ಮಾಲ್ಡೀವ್ಸ್‌ನಲ್ಲಿ 15 ದಿನಗಳ ತುರ್ತು ಪರಿಸ್ಥಿತಿ ಘೋಷಣೆ

Published:
Updated:
ಮಾಲ್ಡೀವ್ಸ್‌ನಲ್ಲಿ 15 ದಿನಗಳ ತುರ್ತು ಪರಿಸ್ಥಿತಿ ಘೋಷಣೆ

ಮಾಲಿ(ಎಎಫ್‌ಪಿ): ಮಾಲ್ಡೀವ್ಸ್‌ ಅಧ್ಯಕ್ಷ ಅಬ್ದುಲ್ಲಾ ಯಮೀನ್ ದೇಶದಲ್ಲಿ 15 ದಿನಗಳ ತುರ್ತು ಪರಿಸ್ಥಿತಿ ಘೋಷಿಸಿದ್ದಾರೆ.

ಇದರಿಂದಾಗಿ ಭದ್ರತಾ ಪಡೆಗಳಿಗೆ ಅನುಮಾನಾಸ್ಪದ ವ್ಯಕ್ತಿಗಳನ್ನು ವಶಕ್ಕೆ ಪಡೆಯುವ ಅಧಿಕಾರ ದೊರೆತಂತಾಗಿದೆ.

ರಾಜಕೀಯ ಕೈದಿಗಳನ್ನು ಬಿಡುಗಡೆ ಮಾಡಿ, ಅವರ ಮೇಲಿನ ಪ್ರಕರಣಗಳನ್ನು ಮರುವಿಚಾರಣೆಗೆ ಒಳಪಡಿಸಬೇಕು ಎಂದು ಸುಪ್ರೀಂಕೋರ್ಟ್‌ ನೀಡಿರುವ ಆದೇಶವನ್ನು ಪಾಲಿಸಲು ಸರ್ಕಾರ ನಿರಾಕರಿಸಿದೆ.

ರಾಜಕೀಯ ಪ್ರಭಾವದಿಂದಾಗಿ ಭಿನ್ನಮತೀಯ ನಾಯಕರಿಗೆ ಶಿಕ್ಷೆ ನೀಡಲಾಗಿದೆ ಎಂದು ಕೋರ್ಟ್‌ ಆದೇಶ ನೀಡಿದ ಒಂದು ವಾರದ ನಂತರ ಸರ್ಕಾರ ಈ ಪ್ರತಿಕ್ರಿಯೆ ನೀಡಿದೆ. ರಾಜಕೀಯ ಕೈದಿಗಳಲ್ಲಿ ಮಾಜಿ ಅಧ್ಯಕ್ಷರೂ ಸೇರಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry