ಬುಧವಾರ, ಡಿಸೆಂಬರ್ 11, 2019
16 °C

ಐಫೋನ್‌ ಬೆಲೆ ಏರಿಕೆ

Published:
Updated:
ಐಫೋನ್‌ ಬೆಲೆ ಏರಿಕೆ

ನವದೆಹಲಿ: ಕೇಂದ್ರ ಸರ್ಕಾರ ಕಸ್ಟಮ್ಸ್‌ ಸುಂಕ ಏರಿಕೆ ಮಾಡಿರುವುದರಿಂದ ಆ್ಯಪಲ್‌ ಕಂಪನಿಯು ತನ್ನ ಐಫೋನ್‌ ಮತ್ತು ಆ್ಯಪಲ್‌ ವಾಚ್‌ಗಳ ಬೆಲೆಯಲ್ಲಿ ಏರಿಕೆ ಮಾಡಿದೆ.

ಐಫೋನ್‌ಗಳ ಬೆಲೆ ₹ 3,210ರವರೆಗೆ ಮತ್ತು ವಾಚ್‌ಗಳ ಬೆಲೆ ₹ 2,510ರವರೆಗೆ ಏರಿಕೆಯಾಗಿದೆ.

ಭಾರತದಲ್ಲಿ ಬಿಡಿಭಾಗಗಳ ಜೋಡಣೆ ಆಗುವ ಐಫೋನ್‌ ಎಸ್‌ಇ ಬಿಟ್ಟು ಉಳಿದೆಲ್ಲಾ ಮಾದರಿಗಳ ಬೆಲೆ ಏರಿಕೆ ಕಂಡಿದೆ.

ಡಿಸೆಂಬರ್‌ನಲ್ಲಿ ಫೋನ್‌ಗಳ ಮೇಲಿನ ಕಸ್ಟಮ್ಸ್‌ ಸುಂಕವನ್ನು ಶೇ 10 ರಿಂದ ಶೇ 15ಕ್ಕೆ ಏರಿಕೆ ಮಾಡಲಾಗಿತ್ತು. ಇದೀಗ ಕೇಂದ್ರ ಬಜೆಟ್‌ನಲ್ಲಿ ಶೇ 15 ರಿಂದ ಶೇ 20ಕ್ಕೆ ಹೆಚ್ಚಿಸಲಾಗಿದೆ.

ಮಾದರಿ ಬೆಲೆ ಏರಿಕೆ ಮಾರಾಟದ ಬೆಲೆ

ಐಫೋನ್‌ ಎಕ್ಸ್‌ (256ಜಿಬಿ) ₹3,210 ₹ 1.08 ಲಕ್ಷ

ಐಫೋನ್‌ 6 (32ಜಿಬಿ) ₹1,120 ₹31,900

ಆ್ಯಪಲ್‌ ವಾಚ್‌ ಸಿರೀಸ್‌ 3 (38ಎಂಎಂ) – ₹ 32,380

42 ಎಂಎಂ – 34,410

ಪ್ರತಿಕ್ರಿಯಿಸಿ (+)