ಲೂಧಿಯಾನ: ತರಕಾರಿ ಮಂಡಿಯಲ್ಲಿ ಭಾರಿ ಬೆಂಕಿ ಅವಘಡ

ಲೂಧಿಯಾನ: ಪಂಜಾಬ್‌ನ ಲೂಧಿಯಾನದಲ್ಲಿನ ನ್ಯೂ ಡಾನ ತರಕಾರಿ ಮಾರಾಟ ಮಂಡಿಯಲ್ಲಿ ಮಂಗಳವಾರ ಭಾರಿ ಅಗ್ನಿ ಅವಘಡ ಸಂಭವಿಸಿದೆ.
ಬೆಂಕಿಯ ಕೆನ್ನಾಲಿಗೆ ವ್ಯಾಪಕವಾಗಿ ಹರಡಿದ್ದು, ನೂರಾರು ಮೀಟರ್ ಎತ್ತರಕ್ಕೆ ಹೊಗೆ ಮೇಲೆದ್ದಿದೆ.
ಸ್ಥಳಕ್ಕೆ ಅಗ್ನಿ ಶಾಮಕ ವಾಹನಗಳು ಬಂದಿದ್ದು, ಸಿಬ್ಬಂದಿ ಬೆಂಕಿ ನಂದಿಸುವಲ್ಲಿ ತೊಡಗಿದ್ದಾರೆ. ಅವಘಡಕ್ಕೆ ಕಾರಣ ತಿಳಿದುಬಂದಿಲ್ಲ. ಘಟನೆಯಲ್ಲಿ ಯಾವುದೆ ನೋವು ಸಂಭವಿಸಿದ ಬಗ್ಗೆ ವರದಿಯಾಗಿಲ್ಲ.
ಅಗ್ನಿ ಶಾಮಕ ಸಿಬ್ಬಂದಿ ಪೊಲೀಸರ ನೆರವಿನೊಂದಿಗೆ ಯಾರಾದರೂ ಅಪಾಯದಲ್ಲಿ ಸಿಲುಕಿದ್ದಾರೆಯೇ ಎಂದು ಶೋಧ ನಡೆಸಿದ್ದಾರೆ. ಘಟನೆ ಬಗ್ಗೆ ಹೆಚ್ಚಿನ ಮಾಹಿತಿ ಲಭ್ಯವಾಗಿಲ್ಲ.
Fire broke out in New Dana Mandi, a vegetable market in Ludhiana. More details awaited #Punjab pic.twitter.com/m546qLZQl9
— ANI (@ANI) February 6, 2018
ಪ್ರತಿಕ್ರಿಯಿಸಿ (+)