‘ಅಗ್ನಿ–1’ ಪರೀಕ್ಷೆ ಯಶಸ್ವಿ

7

‘ಅಗ್ನಿ–1’ ಪರೀಕ್ಷೆ ಯಶಸ್ವಿ

Published:
Updated:
‘ಅಗ್ನಿ–1’ ಪರೀಕ್ಷೆ ಯಶಸ್ವಿ

ಬಾಲೇಶ್ವರ (ಒಡಿಶಾ): ಅಣ್ವಸ್ತ್ರ ಸಿಡಿತಲೆ ಹೊತ್ತೊಯ್ಯುವ ಸಾಮರ್ಥ್ಯವಿರುವ, ಕಡಿಮೆ ದಾಳಿ ವ್ಯಾಪ್ತಿಯ ‘ಅಗ್ನಿ–1’ ಕ್ಷಿಪಣಿಯ ಪರೀಕ್ಷಾರ್ಥ ಪ್ರಯೋಗ ಯಶಸ್ವಿಯಾಗಿದೆ ಎಂದು ರಕ್ಷಣಾ ಮೂಲಗಳು ತಿಳಿಸಿವೆ.

ಸೇನೆಯ ಯುದ್ಧತಂತ್ರ ವಿಭಾಗವು (ಎಸ್‌ಎಫ್‌ಸಿ) ಒಡಿಶಾ ಕರಾವಳಿಯಲ್ಲಿರುವ ಅಬ್ದುಲ್‌ ಕಲಾಂ ದ್ವೀಪದಲ್ಲಿ ಮಂಗಳವಾರ ಬೆಳಿಗ್ಗೆ ಈ ಪರೀಕ್ಷೆ ನಡೆಸಿದೆ.

ಕಾರ್ಯಾಚರಣೆ ಸನ್ನದ್ಧತೆ ಪರಿಶೀಲಿಸಲು ಎಸ್‌ಎಫ್‌ಸಿ ನಡೆಸುವ ನಿಯಮಿತ ತರಬೇತಿ ಚಟುವಟಿಕೆಯ ಭಾಗವಾಗಿ ಈ ಪರೀಕ್ಷೆ ನಡೆಸಲಾಗಿದೆ ಎಂದು ಮೂಲಗಳು ಹೇಳಿವೆ. 

ಸ್ವದೇಶಿ ತಂತ್ರಜ್ಞಾನದಲ್ಲಿ ನಿರ್ಮಿಸಲಾಗಿರುವ ಅತ್ಯಾಧುನಿಕ ‘ಅಗ್ನಿ–1’ಯ ಪರೀಕ್ಷೆ ಸಂಪೂರ್ಣವಾಗಿ ಯಶಸ್ವಿಯಾಗಿದೆ. ಪೂರ್ವ ನಿಗದಿತ ಗುರಿಯನ್ನು ಅತ್ಯಂತ ನಿಖರವಾಗಿ ಕ್ಷಿಪಣಿ ತಲುಪಿದೆ ಎಂದು ಮೂಲಗಳು ಹೇಳಿವೆ.

ಬರಹ ಇಷ್ಟವಾಯಿತೆ?

  • 0

    Happy
  • 0

    Amused
  • 0

    Sad
  • 0

    Frustrated
  • 0

    Angry