ಡೊರೆನ್‌ ವರ್ಷದ ಆಟಗಾರ

7

ಡೊರೆನ್‌ ವರ್ಷದ ಆಟಗಾರ

Published:
Updated:

ಬರ್ಲಿನ್‌: ಬೆಲ್ಜಿಯಂನ ಆರ್ಥರ್‌ ವ್ಯಾನ್ ಡೊರೆನ್‌ ಅಂತರರಾಷ್ಟ್ರೀಯ ಹಾಕಿ ಫೆಡರೇಷನ್‌ನ 2017ರ ಎರಡು ಪ್ರಶಸ್ತಿಗಳಿಗೆ ಪಾತ್ರರಾಗಿದ್ದಾರೆ.

ಅವರು ವರ್ಷದ ಆಟಗಾರ ಮತ್ತು ವರ್ಷದ ಉದಯೋನ್ಮುಖ ಆಟಗಾರ ಆಗಿದ್ದಾರೆ. ಉದಯೋನ್ಮುಖ ಆಟಗಾರ ಪ್ರಶಸ್ತಿ ಸತತ ಎರಡನೇ ಬಾರಿ ಅವರ ಬಗಲಿಗೆ ಸೇರಿದೆ.

ವರ್ಷದ ಆಟಗಾರ್ತಿ ಪ್ರಶಸ್ತಿಗೆ ಅರ್ಜೆಂಟೀನಾದ ಡೆಲ್ಫಿನಾ ಮೆರಿನೊ ಆಯ್ಕೆಯಾಗಿದ್ದಾರೆ.

ಅರ್ಜೆಂಟೀನಾದ ಮರಿಯಾ ಜೋಸ್ ಗ್ರಾನೆಟೊ ವರ್ಷದ ಉದಯೋನ್ಮುಖ ಮಹಿಳಾ ಆಟಗಾರ್ತಿ ಪ್ರಶಸ್ತಿಗೆ ಪಾತ್ರರಾದರು.

ಅವರು ಕೂಡ ನಿರಂತರ ಎರಡನೇ ಬಾರಿ ಈ ಪ್ರಶಸ್ತಿ ತಮ್ಮದಾಗಿಸಿಕೊಂಡಿದ್ದಾರೆ.

ಸೋಮವಾರ ರಾತ್ರಿ ಇಲ್ಲಿ ನಡೆದ ವೈಭವೋಪೇತ ಸಮಾರಂಭದಲ್ಲಿ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಯಿತು.

*

ಬದ್ಧತೆ ಮತ್ತು ಅರ್ಪಣಾ ಮನೋಭಾವದಿಂದ ಅಂಗಣದಲ್ಲಿ ಉತ್ತಮ ಸಾಮರ್ಥ್ಯ ತೋರಿದವರನ್ನು ಪ್ರಶಸ್ತಿ ಹುಡುಕಿಕೊಂಡು ಬಂದಿದೆ. ಗೌರವಕ್ಕೆ ಪಾತ್ರರಾದವರಲ್ಲಿ ಈಗ ಕೃತಾರ್ಥ ಭಾವ ಮೂಡಿದೆ.

-ನರಿಂದರ್‌ ಧ್ರುವ್ ಬಾತ್ರಾ, ಅಂತರರಾಷ್ಟ್ರೀಯ ಹಾಕಿ ಫೆಡರೇಷನ್ ಅಧ್ಯಕ್ಷ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry