ಶುಕ್ರವಾರ, ಡಿಸೆಂಬರ್ 6, 2019
25 °C
ಕಟ್ಟಡಗಳಲ್ಲಿ ಸಿಲುಕಿದ್ದ 28 ಮಂದಿಯ ರಕ್ಷಣೆ

ತೈವಾನ್‌: ಭಾರೀ ಭೂಕಂಪ, 4 ಸಾವು; 140ಕ್ಕೂ ಹೆಚ್ಚು ಮಂದಿ ಕಣ್ಮರೆ

ಏಜೆನ್ಸಿಸ್‌ Updated:

ಅಕ್ಷರ ಗಾತ್ರ : | |

ತೈವಾನ್‌: ಭಾರೀ ಭೂಕಂಪ, 4 ಸಾವು; 140ಕ್ಕೂ ಹೆಚ್ಚು ಮಂದಿ ಕಣ್ಮರೆ

ತೈಪೆ: ತೈವಾನ್‌ನ ಪ್ರವಾಸಿ ತಾಣವಾದ ಹುಆಲಿಯೆನ್ ನಗರದಲ್ಲಿ ಮಂಗಳವಾರ ತಡರಾತ್ರಿ ಭಾರೀ ಭೂಕಂಪ ಸಂಭವಿಸಿದ್ದು, ನಾಲ್ಕು ಮಂದಿ ಸಾವಿಗೀಡಾಗಿದ್ದಾರೆ. 225ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. 144ಕ್ಕೂ ಹೆಚ್ಚು ಮಂದಿ ಕಣ್ಮರೆಯಾಗಿಯಾಗಿದ್ದಾರೆ. ಕೆಲವರ ಪರಿಸ್ಥಿತಿ ಚಿಂತಾಜನಕವಾಗಿದೆ.

ಹುಆಲಿಯೆನ್ ನಗರದ ಈಶಾನ್ಯ ಭಾಗಕ್ಕೆ 21 ಕಿ.ಮೀ ದೂರದಲ್ಲಿ ಭೂಕಂಪನ ಕೇಂದ್ರ ಪತ್ತೆಯಾಗಿದೆ. ರಿಕ್ಟರ್ ಮಾಪಕದಲ್ಲಿ ಭೂಕಂಪದ ತೀವ್ರತೆ 6.4ರಷ್ಟು ದಾಖಲಾಗಿದೆ.

ಕಳೆದ ಮೂರು ದಿನಗಳಿಂದ ಭೂಮಿ ನಡುಗುವ ಅನುಭವವಾಗುತ್ತಿತ್ತು. ಇದು ಅತ್ಯಂತ ಪ್ರಬಲ ಭೂಕಂಪವಾಗಿದ್ದು, ಗೋಡೆಗಳಲ್ಲಿ ಬಿರುಕು ಬಿಟ್ಟಿವೆ ಎಂದು ಪ್ರತ್ಯಕ್ಷದರ್ಶಿಯೊಬ್ಬರು ಘಟನೆಯನ್ನು ವಿವರಿಸಿದ್ದಾರೆ. 

ಈ ವೇಳೆ ನಾಲ್ಕು ಕಟ್ಟಡಗಳು ಧರೆಗುರುಳಿದಿದೆ. ರಾಷ್ಟ್ರೀಯ ಹೆದ್ದಾರಿಗಳು ಬಿರುಕುಬಿಟ್ಟಿವೆ. ಸಾಕಷ್ಟು ಆಸ್ಪಿ–ಪಾಸ್ತಿ ಹಾನಿಗೊಳಗಾಗಿವೆ. ಇದುವರೆಗೆ ಹೋಟೆಲ್ ಹಾಗೂ ಕಟ್ಟಡಗಳಲ್ಲಿ ಸಿಲುಕಿದ್ದ 28 ಮಂದಿಯನ್ನು ರಕ್ಷಿಸಲಾಗಿದೆ. ಎಂದು ಅಗ್ನಿಶಾಮಕ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ರಾಷ್ಟ್ರೀಯ ವಿಪತ್ತು ತಂಡದಿಂದ ಜನರ ರಕ್ಷಣಾ ಕಾರ್ಯ ಭರದಿಂದ ಸಾಗಿದೆ ಎಂದು ತೈವಾನ್ ಅಧ್ಯಕ್ಷೆ ತ್ಸಾಯಿ ಇಂಗ್ ವೆನ್ ಅವರು ತಿಳಿಸಿದ್ದಾರೆ.

ಕಳೆದ ಎರಡು ವರ್ಷಗಳ ಹಿಂದೆ ತೈನಾನ್‌ನಲ್ಲಿ ನಡೆದಿದ್ದ ಭೂಕಂಪದಲ್ಲಿ 100ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದರು.

ಪ್ರತಿಕ್ರಿಯಿಸಿ (+)