ಶುಕ್ರವಾರ, ಡಿಸೆಂಬರ್ 6, 2019
24 °C

ಆರ್‌ಬಿಐ ಹಣಕಾಸು ನೀತಿ ಪ್ರಕಟ: ಬಡ್ಡಿ ದರದಲ್ಲಿ ಕಡಿತ ಇಲ್ಲ

Published:
Updated:
ಆರ್‌ಬಿಐ ಹಣಕಾಸು ನೀತಿ ಪ್ರಕಟ: ಬಡ್ಡಿ ದರದಲ್ಲಿ ಕಡಿತ ಇಲ್ಲ

ಮುಂಬೈ: ರಿಸರ್ವ್ ಬ್ಯಾಂಕ್ ಆಫ್‌ ಇಂಡಿಯಾ (ಆರ್‌ಬಿಐ) ದ್ವೈಮಾಸಿಕ ಹಣಕಾಸು ನೀತಿಯನ್ನು ಬುಧವಾರ ಪ್ರಕಟಿಸಿದ್ದು, ರೆಪೊ ದರ ಕಡಿತ ಮಾಡಿಲ್ಲ.

ಈಗಿರುವ ಶೇ 6ರ ರೆಪೊ ದರವನ್ನೇ (ಬ್ಯಾಂಕ್‌ಗಳಿಗೆ ಆರ್‌ಬಿಐ ನೀಡುವ ಸಾಲದ ಮೇಲೆ ವಿಧಿಸಲಾಗುತ್ತಿರುವ ಬಡ್ಡಿ ದರ) ಮುಂದುವರಿಸಲಾಗಿದೆ. ಶೇ 5.75ರ ರಿವರ್ಸ್ ರೆಪೊ ದರವನ್ನೂ ಹಾಗೆಯೇ ಮುಂದುವರಿಸಲಾಗಿದೆ. ಇದರೊಂದಿಗೆ, ಸತತ ಮೂರನೇ ಹಣಕಾಸು ನೀತಿಯಲ್ಲಿ ರೆಪೊ ದರ ಯಥಾಸ್ಥಿತಿ ಕಾಯ್ದುಕೊಂಡಂತಾಗಿದೆ.

2017-18ನೇ ಸಾಲಿನ ಆರ್ಥಿಕ ಬೆಳವಣಿಗೆ ದರ ಶೇ 6.6 ಇರಲಿದೆ ಎಂದು ಹಣಕಾಸು ನೀತಿಯಲ್ಲಿ ಉಲ್ಲೇಖಿಸಲಾಗಿದೆ. ಇದು ಈ ಹಿಂದೆ ಮಾಡಲಾಗಿದ್ದ ಅಂದಾಜಿಗಿಂತ ಕಡಿಮೆಯಾಗಿದೆ. ಮುಂದಿನ ವಿತ್ತ ವರ್ಷದಲ್ಲಿ ಆರ್ಥಿಕ ಬೆಳವಣಿಗೆ ದರ ಶೇ 7.2ರಷ್ಟಿರಲಿದೆ ಎಂದು ಹಣಕಾಸು ನೀತಿಯಲ್ಲಿ ಅಂದಾಜಿಸಲಾಗಿದೆ.

ಪ್ರತಿಕ್ರಿಯಿಸಿ (+)