ಶನಿವಾರ, ಜೂನ್ 6, 2020
27 °C

ಮನರಂಜನಾ ಪಾರ್ಕ್‌ಗಳ ಪ್ರವೇಶ ಟಿಕೆಟ್‌ ಜಿಎಸ್‌ಟಿ ಶೇ 18ಕ್ಕೆ ಇಳಿಕೆ

ಪಿಟಿಐ Updated:

ಅಕ್ಷರ ಗಾತ್ರ : | |

ಮನರಂಜನಾ ಪಾರ್ಕ್‌ಗಳ ಪ್ರವೇಶ ಟಿಕೆಟ್‌ ಜಿಎಸ್‌ಟಿ ಶೇ 18ಕ್ಕೆ ಇಳಿಕೆ

ನವದೆಹಲಿ: ಮನರಂಜನಾ ಪಾರ್ಕ್‌, ವಾಟರ್‌ ಪಾರ್ಕ್‌ಗಳ ಪ್ರವೇಶಕ್ಕೆ ವಿಧಿಸಲಾಗುತ್ತಿದ್ದ ಶೇ 28ರಷ್ಟು ಸರಕು ಮತ್ತು ಸೇವಾ ತೆರಿಗೆಯನ್ನು ಶೇ 18ಕ್ಕೆ ತಗ್ಗಿಸಲಾಗಿದೆ.

ರಾಜ್ಯ ಸರ್ಕಾರಗಳು ಪಂಚಾಯತ್‌, ಸ್ಥಳೀಯ ನಗರಸಭೆಗಳ ಮೂಲಕ ಈ ಪಾರ್ಕ್‌ಗಳ ಪ್ರವೇಶದ ಮೇಲೆ ಮನರಂಜನಾ ತೆರಿಗೆ ಹೆಸರಿನಲ್ಲಿ ಸ್ಥಳೀಯ ತೆರಿಗೆಗಳನ್ನು ಹೇರದೆ, ಒಟ್ಟಾರೆ ತೆರಿಗೆ ಭಾರ ಕಡಿಮೆ ಮಟ್ಟದಲ್ಲಿಯೇ ಇರುವಂತೆ ನೋಡಿಕೊಳ್ಳಬೇಕು. ಪ್ರತ್ಯೇಕವಾಗಿ ಸ್ಥಳೀಯ ತೆರಿಗೆಗಳನ್ನು ವಿಧಿಸದಿದ್ದರೆ ಮಾತ್ರ ಜಿಎಸ್‌ಟಿ ಕಡಿತದ ಪ್ರಯೋಜನವನ್ನು ಮಕ್ಕಳು ಮತ್ತು ಕುಟುಂಬಗಳಿಗೆ ವರ್ಗಾಯಿಸಲು ಸಾಧ್ಯವಾಗಲಿದೆ ಎಂದು ಹಣಕಾಸು ಸಚಿವಾಲಯ ಅಭಿಪ್ರಾಯಪಟ್ಟಿದೆ. ಹೊಸ ದರ ಜನವರಿ 25 ರಿಂದಲೇ ಅನ್ವಯವಾಗಿವೆ.

ಸರ್ಕಸ್‌, ನಾಟಕ, ಸಂಗೀತ, ನೃತ್ಯ, ಮಾನ್ಯತೆ ಪಡೆದ ಕ್ರೀಡೆ ಮತ್ತು ಇತರ ಮನರಂಜನಾ ಪ್ರದರ್ಶನಗಳ ಟಿಕೆಟ್‌ ದರಗಳ ಮೇಲಿನ ಜಿಎಸ್‌ಟಿ ವಿನಾಯ್ತಿ ಮಿತಿಯನ್ನು ದುಪ್ಪಟ್ಟುಗೊಳಿಸಿ ₹ 500ಕ್ಕೆ ಹೆಚ್ಚಿಸಲಾಗಿದೆ.

ಅಪಾರ್ಟ್‌ಮೆಂಟ್‌ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘಗಳ (ಆರ್‌ಡಬ್ಲ್ಯುಎ) ಸದಸ್ಯರ ತಿಂಗಳ ಮಾಸಿಕ ಕಂತಿನ ಜಿಎಸ್‌ಟಿ ವಿನಾಯ್ತಿ ಮಿತಿಯನ್ನೂ ಮಂಡಳಿಯು ಹೆಚ್ಚಿಸಿದೆ. ತಿಂಗಳ ಮಾಸಿಕ ಕಂತಿನ ಮೊತ್ತವು ₹ 7,500ಕ್ಕಿಂತ ಹೆಚ್ಚಿಗೆ ಇದ್ದರೆ ಮಾತ್ರ ಸಂಘಗಳು ಇನ್ನು ಮುಂದೆ ಜಿಎಸ್‌ಟಿ ಪಾವತಿಸಬೇಕಾಗುತ್ತದೆ. ಸದ್ಯಕ್ಕೆ ಪ್ರತಿ ಸದಸ್ಯ ಪ್ರತಿ ತಿಂಗಳೂ ₹ 5,000 ಪಾವತಿಸುತ್ತಿದ್ದರೆ ಜಿಎಸ್‌ಟಿ ಅನ್ವಯವಾಗುತ್ತಿತ್ತು.

ಜನರೇಟರ್ಸ್‌, ವಾಟರ್‌ ಪಂಪ್ಸ್‌, ನಲ್ಲಿ, ಕೊಳವೆ ಪೀಠೋಪಕರಣ ಖರೀದಿಗೆ ಸಂಘಗಳು ಪಾವತಿಸಿದ ತೆರಿಗೆ ಮತ್ತು ದುರಸ್ತಿ ಮತ್ತು ನಿರ್ವಹಣಾ ಸೇವೆಗಳಿಗೆ ಇನ್ನು ಮುಂದೆ ಹುಟ್ಟುವಳಿ ತೆರಿಗೆ (ಐಟಿಸಿ) ಸೌಲಭ್ಯ ಅನ್ವಯವಾಗಲಿದೆ.

ಮನೆ ಖರೀದಿ: ಕೈಗೆಟುಕುವ ಮನೆ ನಿರ್ಮಾಣ ಯೋಜನೆಗಳಲ್ಲಿ ಖರೀದಿದಾರರಿಗೆ ಕಟ್ಟಡ ನಿರ್ಮಾಣಗಾರರು ವಿಧಿಸುತ್ತಿರುವ ಶೇ 8ರಷ್ಟು ಜಿಎಸ್‌ಟಿ ವಸೂಲಿ ಮಾಡಬಾರದು ಎಂದು ಸರ್ಕಾರ ಕೇಳಿಕೊಂಡಿದೆ.

ಈ ಜಿಎಸ್‌ಟಿಯನ್ನು ಹುಟ್ಟುವಳಿ ತೆರಿಗೆಯಲ್ಲಿ ಹೊಂದಾಣಿಕೆ ಮಾಡುವುದರಿಂದ ಖರೀದಿದಾರರಿಂದ ವಸೂಲಿ ಮಾಡಬಾರದು ಎಂದು ಸೂಚಿಸಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.