31 ಕಲಾವಿದರಿಗೆ ಜಾನಪದ ಲೋಕ ಪ್ರಶಸ್ತಿ

7

31 ಕಲಾವಿದರಿಗೆ ಜಾನಪದ ಲೋಕ ಪ್ರಶಸ್ತಿ

Published:
Updated:

ರಾಮನಗರ: ಕರ್ನಾಟಕ ಜಾನಪದ ಪರಿಷತ್ತಿನ ಆಶ್ರಯದಲ್ಲಿ ಇಲ್ಲಿನ ಜಾನಪದ ಲೋಕದ ಆವರಣದಲ್ಲಿ ಫೆ. 10 ಹಾಗೂ 11ರಂದು ಪ್ರವಾಸಿ ಲೋಕೋತ್ಸವ ಕಾರ್ಯಕ್ರಮವು ನಡೆಯಲಿದೆ. ಈ ಸಂದರ್ಭ ಪರಿಷತ್ತಿನ ವತಿಯಿಂದ ಒಟ್ಟು 31 ಮಂದಿಗೆ ಪ್ರಶಸ್ತಿ ಪ್ರದಾನ ಮಾಡಲಾಗುವುದು.

ಬೆಂಗಳೂರಿನ ಜನಪದ ಲೇಖಕರಾದ ಗಣಪತಿ ಚವ್ಹಾಣ ಮತ್ತು ಸರೋಜಾ ಚವ್ಹಾಣ ಅವರೂ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ ಎಂದು ಪರಿಷತ್ತಿನ ಅಧ್ಯಕ್ಷ ಟಿ. ತಿಮ್ಮೇಗೌಡ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಪ್ರಶಸ್ತಿ ಪ್ರದಾನ ಸಮಾರಂಭವು 11ರಂದು ಸಂಜೆ 5.30ಕ್ಕೆ ನಡೆಯಲಿದೆ. ಪ್ರತಿ ಕಲಾವಿದರಿಗೆ ₹10 ಸಾವಿರ ನಗದು ಹಾಗೂ ನೆನಪಿನ ಕಾಣಿಕೆ ನೀಡಿ ಗೌರವಿಸಲಾಗುವುದು ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry