ಧೀರಜ್ ಸಿಂಗ್‌ಗೆ ಸ್ಕಾಟ್ಲೆಂಡ್‌ನಲ್ಲಿ ತರಬೇತಿ

7
ಇಂಡಿಯನ್ ಆ್ಯಾರೋಸ್‌ ತಂಡಕ್ಕೆ ವಿದಾಯ ಹೇಳಿದ 17 ವರ್ಷದೊಳಗಿನವರ ಫುಟ್‌ಬಾಲ್ ಆಟಗಾರ

ಧೀರಜ್ ಸಿಂಗ್‌ಗೆ ಸ್ಕಾಟ್ಲೆಂಡ್‌ನಲ್ಲಿ ತರಬೇತಿ

Published:
Updated:

ಮುಂಬೈ: ಕಿರಿಯರ ವಿಶ್ವಕಪ್‌ ಫುಟ್‌ಬಾಲ್‌ ಟೂರ್ನಿಯಲ್ಲಿ ಮಿಂಚಿದ ಗೋಲ್‌ಕೀಪರ್‌ ಧೀರಜ್ ಸಿಂಗ್‌ ಮೊಯಿರಂಗ್‌ಥೆಮ್‌ ವಿಶೇಷ ತರಬೇತಿಗಾಗಿ ಸ್ಕಾಟ್ಲೆಂಡ್‌ಗೆ ತೆರಳಿದ್ದಾರೆ. ಅಲ್ಲಿನ ಪ್ರೀಮಿಯರ್‌ ಲೀಗ್‌ನಲ್ಲಿ ಆಡುವ ಕ್ಲಬ್‌ ಮದರ್‌ವೆಲ್‌ ಎಫ್‌ಸಿಯಲ್ಲಿ ತರಬೇತಿ ಪಡೆಯಲು ಅವರಿಗೆ ಅವಕಾಶ ಲಭಿಸಿದೆ. ಗುರುವಾರ ತರಬೇತಿ ಆರಂಭವಾಗಲಿದೆ.

ಕಳೆದ ವರ್ಷದ ಭಾರತದಲ್ಲಿ ನಡೆದ 17 ವರ್ಷದೊಳಗಿನವರ ವಿಶ್ವಕಪ್‌ ಟೂರ್ನಿಯಲ್ಲಿ ಭಾರತದ ಗೋಲು ಪೆಟ್ಟಿಗೆಯನ್ನು ಕಾದ ಅವರು ಅನೇಕ ಬಾರಿ ಎದುರಾಳಿಗಳ ದಾಳಿಯನ್ನು ತಡೆದು ಗಮನ ಸೆಳೆದಿದ್ದರು. ಈ ಸಂದರ್ಭದಲ್ಲಿ ಮದರ್‌ವೆಲ್‌ ಎಫ್‌ಸಿ ಅವರನ್ನು ಕರೆಸಿಕೊಳ್ಳಲು ಮನಸ್ಸು ಮಾಡಿತ್ತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry