ಭಾನುವಾರ, ಡಿಸೆಂಬರ್ 8, 2019
25 °C

ಕೊಪ್ಪಳ: ಟ್ರ್ಯಾಕ್ಟರ್–ಟ್ಯಾಂಕರ್ ನಡುವೆ ಅಪಘಾತ, ನಾಲ್ವರ ದುರ್ಮರಣ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೊಪ್ಪಳ: ಟ್ರ್ಯಾಕ್ಟರ್–ಟ್ಯಾಂಕರ್ ನಡುವೆ ಅಪಘಾತ, ನಾಲ್ವರ ದುರ್ಮರಣ

ಕೊಪ್ಪಳ: ಇಲ್ಲಿನ ಕುಕನೂರಿನ ಬನ್ನಿಕೊಪ್ಪ ಗ್ರಾಮದ ಬಳಿ ರಾಷ್ಟ್ರೀಯ ಹೆದ್ದಾರಿ -63ರಲ್ಲಿ ಟ್ರ್ಯಾಕ್ಟರ್ ಹಾಗೂ ಡೀಸೆಲ್ ಟ್ಯಾಂಕರ್ ನಡುವೆ ಗುರುವಾರ ಸಂಭವಿಸಿದ ಅಪಘಾತದಲ್ಲಿ ನಾಲ್ವರು ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ. 8 ಜನರು ಗಾಯಗೊಂಡಿದ್ದಾರೆ. 

ಮೃತರನ್ನು ಚನ್ನಪ್ಪ ಈರಪ್ಪ ಹಡಪದ (35), ಈರಮ್ಮ  ಹಡಪದ (55), ಬಿಬಿಜಾನ್ ಕವಲೂರು (40) ಮಹಮದ್ ರಫಿ (19). ಎಲ್ಲರೂ ಬನ್ನಿಕೊಪ್ಪ ಗ್ರಾಮದವರು ಎಂದು ತಿಳಿದು ಬಂದಿದೆ.

ಕುಕನೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರತಿಕ್ರಿಯಿಸಿ (+)