ಮಗನ ಮದುವೆ: ಬಿಜೆಪಿಯ ಮುರುಗೇಶ್‌ ನಿರಾಣಿಯಿಂದ ಪತ್ರಕರ್ತರಿಗೆ ಉಡುಗೊರೆ

7

ಮಗನ ಮದುವೆ: ಬಿಜೆಪಿಯ ಮುರುಗೇಶ್‌ ನಿರಾಣಿಯಿಂದ ಪತ್ರಕರ್ತರಿಗೆ ಉಡುಗೊರೆ

Published:
Updated:
ಮಗನ ಮದುವೆ: ಬಿಜೆಪಿಯ ಮುರುಗೇಶ್‌ ನಿರಾಣಿಯಿಂದ ಪತ್ರಕರ್ತರಿಗೆ ಉಡುಗೊರೆ

ಬಾಗಲಕೋಟೆ: ಬಿಜೆಪಿ ಮುಖಂಡ ಮುರುಗೇಶ್‌ ನಿರಾಣಿ ತಮ್ಮ ಮಗನ ಮದುವೆ ಪ್ರಯುಕ್ತ ಜಿಲ್ಲೆಯ ಪರ್ತಕರ್ತರಿಗೆ ಸೂಟುಬೂಟು ಮತ್ತು ರೇಷ್ಮೆಸೀರೆಗಳನ್ನು ಹಂಚುತ್ತಿದ್ದಾರೆ.

ನಿರಾಣಿ ಅವರ ಮಗ ಮತ್ತು ಸಂಸದ ಜಿ.ಎಂ.ಸಿದ್ದೇಶ್ವರ ಅವರ ತಮ್ಮನ ಮಗಳಿಗೆ ವಿವಾಹ ನಿಶ್ಚಯವಾಗಿದೆ. ವಿವಾಹದ ಆಮಂತ್ರಣ ಪತ್ರದ ಜತೆಗೆ ಉಡುಗೊರೆಗಳನ್ನು ವಿತರಿಸಲಾಗುತ್ತಿದೆ.

ಮದುವೆ ನಿಮಿತ್ತ ನಿರಾಣಿ ಅವರು ಪತ್ರಕರ್ತರಿಗೆ ಆರೋಗ್ಯ ವಿಮೆಯನ್ನೂ ಮಾಡಿಸುತ್ತಿದ್ದಾರೆ.

ಬಾಗಲಕೋಟೆ ಜಿಲ್ಲೆಯ ‘ಪ್ರಜಾವಾಣಿ’ ವರದಿಗಾರ ಜಿ.ಎಚ್‌.ವೆಂಕಟೇಶ ‘ಉತ್ತಮ ಬಟ್ಟೆಗಳನ್ನು ಕೊಳ್ಳುವಷ್ಟು ಸಂಬಳವನ್ನು ನನ್ನ ಸಂಸ್ಥೆ ನೀಡುತ್ತಿದೆ’ ಎಂದು ಉಡುಗೊರೆ ನಿರಾಕರಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry