ಮರಾಠಿ ಸಮ್ಮೇಳನ; ಪ್ರವೇಶ ದ್ವಾರಕ್ಕೆ ಗೌರಿ ಲಂಕೇಶ್‌ ಹೆಸರು

7

ಮರಾಠಿ ಸಮ್ಮೇಳನ; ಪ್ರವೇಶ ದ್ವಾರಕ್ಕೆ ಗೌರಿ ಲಂಕೇಶ್‌ ಹೆಸರು

Published:
Updated:

ಬೆಳಗಾವಿ: ತಾಲ್ಲೂಕಿನ ಯಳ್ಳೂರಿನಲ್ಲಿ ಇದೇ 11ರಂದು ಗ್ರಾಮೀಣ ಮರಾಠಿ ಸಾಹಿತ್ಯ ಸಮ್ಮೇಳನ ಆಯೋಜಿಸಿದ್ದು, ಅದರ ಪ್ರವೇಶ ದ್ವಾರಕ್ಕೆ ಇತ್ತೀಚೆಗೆ ಹತ್ಯೆಯಾದ ಪತ್ರಕರ್ತೆ ಗೌರಿ ಲಂಕೇಶ್‌ ಹೆಸರು ಇಡಲಾಗಿದೆ.

ಮರಾಠಿಗರು ಹೆಚ್ಚಿನ ಸಂಖ್ಯೆಯಲ್ಲಿರುವ ಈ ಗ್ರಾಮವನ್ನು ಮಹಾರಾಷ್ಟ್ರಕ್ಕೆ ಸೇರಿಸಬೇಕೆಂದು ಹಲವು ವರ್ಷಗಳಿಂದ ಸ್ಥಳೀಯರು ಒತ್ತಾಯಿಸುತ್ತಿದ್ದಾರೆ. ಇತ್ತೀಚೆಗೆ ಇಲ್ಲಿ ‘ಯಳ್ಳೂರು– ಮಹಾರಾಷ್ಟ್ರ ರಾಜ್ಯ’ ಎಂದು ನಾಮಫಲಕ ಹಾಕಿದ್ದು ವಿವಾದಕ್ಕೆ ಕಾರಣವಾಗಿತ್ತು. ನ್ಯಾಯಾಲಯದ ಆದೇಶದ ಬಳಿಕ ಅದನ್ನು ತೆರವುಗೊಳಿಸಲಾಗಿತ್ತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry