4

ರಾಜಧಾನಿ, ಶತಾಬ್ದಿ ಎಕ್ಸ್‌ಪ್ರೆಸ್‌ಗಳಲ್ಲಿ ಶೀಘ್ರ ಸಿ.ಸಿ.ಟಿ.ವಿ. ಕಣ್ಗಾವಲು

Published:
Updated:
ರಾಜಧಾನಿ, ಶತಾಬ್ದಿ ಎಕ್ಸ್‌ಪ್ರೆಸ್‌ಗಳಲ್ಲಿ ಶೀಘ್ರ ಸಿ.ಸಿ.ಟಿ.ವಿ. ಕಣ್ಗಾವಲು

ನವದೆಹಲಿ: ರಾಜಧಾನಿ, ಶತಾಬ್ದಿ ಮತ್ತು ತುರಂತೊ ಎಕ್ಸ್‌ಪ್ರೆಸ್‌ ರೈಲುಗಳ ಪ್ರತಿ ಬೋಗಿಗಳಲ್ಲಿ ನಾಲ್ಕು ಸಿ.ಸಿ.ಟಿ.ವಿ. ಕ್ಯಾಮೆರಾಗಳನ್ನು ಅಳವಡಿಸಲಾಗುತ್ತದೆ ಭಾರತೀಯ ರೈಲ್ವೆ ಹೇಳಿದೆ. ಸುರಕ್ಷತಾ ಕ್ರಮದ ಅಂಗವಾಗಿ ಈ ಯೋಜನೆ ಕೈಗೆತ್ತಿಕೊಳ್ಳಲಾಗಿದೆ. ಶೀಘ್ರವೇ ಅಳವಡಿಕೆ ಕಾರ್ಯ ಆರಂಭವಾಗಲಿದೆ ಎಂದು ರೈಲ್ವೆ ತಿಳಿಸಿದೆ.

 

134 ‘ಎಕ್ಸ್‌ಪ್ರೆಸ್‌’ಗಳಲ್ಲಿ ಅಳವಡಿಕೆ

23 ಜೋಡಿ

ರಾಜಧಾನಿ ಎಕ್ಸ್‌ಪ್ರೆಸ್‌ಗಳು

26 ಜೋಡಿ

ಶತಾಬ್ದಿ ಎಕ್ಸ್‌ಪ್ರೆಸ್‌ಗಳು

18 ಜೋಡಿ

ತುರಂತೊ ಎಕ್ಸ್‌ಪ್ರೆಸ್‌ಗಳು

––– –––– –––––– –––––

ಎಲ್ಲಿ ಅಳವಡಿಕೆ

ಬೋಗಿಯ ಕಾರಿಡಾರ್‌ನಲ್ಲಿ ಎರಡು ಕ್ಯಾಮೆರಾಗಳು

ಬೋಗಿಯ ಬಾಗಿಲುಗಳ ಬಳಿ ಎರಡು ಕ್ಯಾಮೆರಾಗಳು

––––––––––––––––––

₹ 3,000 ಕೋಟಿ

ರೈಲುಗಳಲ್ಲಿ ಸಿ.ಸಿ.ಟಿ.ವಿ. ಕ್ಯಾಮೆರಾಗಳನ್ನು ಅಳವಡಿಸಲು 2018–19ರ ಬಜೆಟ್‌ನಲ್ಲಿ ಮೀಸಲಿರಿಸಿರುವ ಹಣ

11,000 ರೈಲುಗಳಲ್ಲಿ ಸಿ.ಸಿ.ಟಿ.ವಿ. ಕ್ಯಾಮೆರಾಗಳನ್ನು ಅಳವಡಿಸಲಾಗುತ್ತದೆ

8,500 ರೈಲು ನಿಲ್ದಾಣಗಳಲ್ಲಿ ಸಿ.ಸಿ.ಟಿ.ವಿ. ಕ್ಯಾಮೆರಾಗಳನ್ನು ಅಳವಡಿಕೆಗೆ ಯೋಜನೆಯನ್ನು ವಿಸ್ತರಿಸಲಾಗುತ್ತದೆ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry