ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮ್ಯೂಚುವಲ್‌ ಫಂಡ್ಸ್‌: 18 ಹೊಸ ಯೋಜನೆ

ಷೇರು ನಿಯಂತ್ರಣ ಮಂಡಳಿಗೆ ಹೊಸ ಪ್ರಸ್ತಾವ ಸಲ್ಲಿಕೆ
Last Updated 8 ಫೆಬ್ರುವರಿ 2018, 20:02 IST
ಅಕ್ಷರ ಗಾತ್ರ

ನವದೆಹಲಿ: ಮ್ಯೂಚುವಲ್‌ ಫಂಡ್‌ಗಳತ್ತ ಸಾಮಾನ್ಯ ಹೂಡಿಕೆದಾರರ ಸೆಳೆತ ಹೆಚ್ಚುತ್ತಿರುವುದರಿಂದ ಸಂಪತ್ತು ನಿರ್ವಹಣಾ ಸಂಸ್ಥೆಗಳು ಈ ವರ್ಷ 18 ಹೊಸ ಯೋಜನೆಗಳನ್ನು ಆರಂಭಿಸಲು ಷೇರು ನಿಯಂತ್ರಣ ಮಂಡಳಿಯ (ಸೆಬಿ) ಅನುಮತಿ ಕೋರಿವೆ.

ಸ್ಥಿರ ಪರಿಪಕ್ವ ಯೋಜನೆ, ಷೇರುಪೇಟೆ ಹೂಡಿಕೆ ನಿಧಿ, ಷೇರು ಮತ್ತು ಸಾಲಪತ್ರಗಳಲ್ಲಿ ಹೂಡಿಕೆಗೆ ಸಂಬಂಧಿಸಿದ ಯೋಜನೆಗಳ ಕರಡು ದಾಖಲೆಗಳನ್ನು ‘ಸೆಬಿ’ಗೆ ಸಲ್ಲಿಸಲಾಗಿದೆ.

ಮಹೀಂದ್ರಾ, ಆ್ಯಕ್ಸಿಸ್‌, ಆದಿತ್ಯ ಬಿರ್ಲಾ ಸನ್‌ಲೈಫ್‌, ಎಚ್‌ಎಸ್‌ಬಿಸಿ, ಯುಟಿಐ, ರಿಲಯನ್ಸ್‌, ಕೋಟಕ್‌, ಟಾಟಾ, ಫ್ರಾಂಕ್ಲಿನ್‌, ಎಸ್‌ಬಿಐ, ಸುಂದರಂ ಮತ್ತು ಶ್ರೀರಾಂ ಮ್ಯೂಚುವಲ್‌ ಫಂಡ್‌ ಸಂಸ್ಥೆಗಳು ‘ಹೊಸ ನಿಧಿ ಕೊಡುಗೆಯ (ಎನ್‌ಎಫ್‌ಒ) ದಾಖಲೆಗಳನ್ನು ಪೇಟೆಯ ನಿಯಂತ್ರಣ ಸಂಸ್ಥೆ ‘ಸೆಬಿ’ಗೆ ಸಲ್ಲಿಸಿವೆ.

ಎಸ್‌ಬಿಐ ಮ್ಯೂಚುವಲ್‌ ಫಂಡ್‌, ಮೂರು ಯೋಜನೆಗಳನ್ನು ಆರಂಭಿಸಲು ಕೋರಿಕೆ ಸಲ್ಲಿಸಿದೆ. ಇತರ ಸಂಸ್ಥೆಗಳು ತಲಾ ಒಂದೊಂದು ಹೊಸ ಯೋಜನೆ ಆರಂಭಿಸಲು ಮುಂದಾಗಿವೆ.

ಮಹೀಂದ್ರಾ ಮ್ಯೂಚುವಲ್‌ ಫಂಡ್‌, ಹಿಂದಿಯಲ್ಲಿ ‘ರೂರಲ್‌ ಭಾರತ್  ಯೋಜನಾ’ ಹೆಸರಿನ ಯೋಜನೆ ಮೂಲಕ ಗ್ರಾಮೀಣ ಭಾಗದ ಹೂಡಿಕೆದಾರರನ್ನು ಸೆಳೆಯಲು ಮುಂದಾಗಿದೆ. ಹೂಡಿಕೆ ಯೋಜನೆಗಳಿಗೆ ಇಂಗ್ಲಿಷ್‌ ಹೆಸರು ಇಡುವ ಪ್ರವೃತ್ತಿಗಿಂತ ಇದು ಭಿನ್ನವಾಗಿದೆ.

ಇತ್ತೀಚಿನ ದಿನಗಳಲ್ಲಿ ರಿಟೇಲ್‌ ಹೂಡಿಕೆದಾರರಲ್ಲಿ ಮ್ಯೂಚುವಲ್‌ ಫಂಡ್‌ಗಳ ಬಗ್ಗೆ ಹೆಚ್ಚಿನ ಒಲವು ಕಂಡು ಬರುತ್ತಿದೆ. ಮ್ಯೂಚುವಲ್‌ ಫಂಡ್ಸ್‌ಗಳಲ್ಲಿನ ಹೂಡಿಕೆಯು ಕಡಿಮೆ ವೆಚ್ಚದ ಮತ್ತು ಪಾರದರ್ಶಕ ಸ್ವರೂಪದ ವಹಿವಾಟಿನಿಂದಾಗಿ ಗಮನ ಸೆಳೆಯುತ್ತಿದೆ.

ಸಂಪತ್ತು ನಿರ್ವಹಣಾ ಸಂಸ್ಥೆಗಳು (ಎಂಎಫ್‌), ಹೂಡಿಕೆದಾರರು ತೊಡಗಿಸಿದ ಹಣವನ್ನು ಒಟ್ಟುಗೂಡಿಸಿ ಅವರ ಪರವಾಗಿ ಹೂಡಿಕೆ ಮಾಡುತ್ತವೆ. ಷೇರು ಮತ್ತು ಬಾಂಡ್‌ಗಳಲ್ಲಿ ಹಣ ತೊಡಗಿಸುತ್ತವೆ. ಇದಕ್ಕಾಗಿ ಹೂಡಿಕೆದಾರರು ಪ್ರತ್ಯೇಕವಾಗಿ ಷೇರು, ಬಾಂಡ್‌ ಮತ್ತು ಸಾಲ ಪತ್ರ ಖರೀದಿಸುವ ಅಗತ್ಯ ಇರಲಾರದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT