ಶುಕ್ರವಾರ, ಡಿಸೆಂಬರ್ 13, 2019
27 °C

ನಾಳೆಯಿಂದ ಉಚಿತ ‘ನಾಟಾ’ ಕಾರ್ಯಾಗಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನಾಳೆಯಿಂದ ಉಚಿತ ‘ನಾಟಾ’ ಕಾರ್ಯಾಗಾರ

ಉಳ್ಳಾಲ: ನ್ಯಾಷನಲ್ ಆಪ್ಟಿಟ್ಯೂಡ್ ಟೆಸ್ಟ್ ಇನ್ ಆರ್ಕಿಟೆಕ್ಚರ್ (ನಾಟಾ) ಪರೀಕ್ಷೆಯು ದೇಶಾದ್ಯಂತ ವಾಸ್ತುಶಿಲ್ಪ ಪದವಿ ಸೇರ್ಪಡೆಗೆ ಅರ್ಹತಾ ಪರೀಕ್ಷೆಯಾಗಿದ್ದು, ಅದಕ್ಕೆ ಹಾಜರಾಗುವ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ನಿಟ್ಟೆ ಇನ್‍ಸ್ಟಿಟ್ಯೂಟ್ ಆಫ್ ಆರ್ಕಿಟೆಕ್ಚರ್ (ಎನ್‍ಐಎ) ಇದೇ 10 ಮತ್ತು 11ರಂದು ಉಚಿತ ಕಾರ್ಯಾಗಾರ ಆಯೋಜಿಸಿದೆ.

ನಗರದ ಪಂಪ್‍ವೆಲ್ ಸರ್ಕಲ್ ಬಳಿಯ ನಿಟ್ಟೆ ಎಜುಕೇಷನ್ ಇಂಟರ್‍ ನ್ಯಾಷನಲ್‍ನಲ್ಲಿ 10ರಂದು ಹಾಗೂ ನಿಟ್ಟೆಯ ಎನ್‍ಎಂಎಎಂ ತಾಂತ್ರಿಕ ಸಂಸ್ಥೆಯಲ್ಲಿ 11ರಂದು ಕಾರ್ಯಾಗಾರ ನಡೆಯಲಿದೆ.

ನಾಟಾ ಪರೀಕ್ಷೆಗೆ ಅಗತ್ಯವಾದ ಕ್ರ್ಯಾಷ್ ಕೋರ್ಸ್ ಮತ್ತು ಅಣಕು ಪರೀಕ್ಷೆಗಳಿರುತ್ತವೆ. ಆಸಕ್ತ ವಿದ್ಯಾರ್ಥಿಗಳು ಆನ್‍ಲೈನ್ ಮೂಲಕ www.nia.nitte.edu.in *http://www.nia.nitte.edu.in/* ನಲ್ಲಿ ನೊಂದಾಯಿಸಿಕೊಳ್ಳಬಹುದು ಅಥವಾ ಎಂ.ಎಸ್. ನಿಖಿತಾ ಮಾನ್ವಿ (07600153029) ಅಥವಾ ಸಿತಾರಾ ಶೆಟ್ಟಿ (8762123472) ಅವರನ್ನು ಸಂಪರ್ಕಿಸಬಹುದು. ಆಯಾ ದಿನಗಳಂದು ಬೆಳಿಗ್ಗೆ 9ಕ್ಕೆ ನೋಂದಣಿ ಮಾಡಿಕೊಳ್ಳಲಾಗುತ್ತದೆ. ಬೆಳಿಗ್ಗೆ 9.30ಕ್ಕೆ ಕಾರ್ಯಾಗಾರ ಆರಂಭವಾಗುತ್ತದೆ.

ಪ್ರತಿಕ್ರಿಯಿಸಿ (+)