ಶುಕ್ರವಾರ, ಡಿಸೆಂಬರ್ 6, 2019
26 °C

ಚಳಿಗಾಲದ ಒಲಿಂಪಿಕ್‌ ಕೂಟಕ್ಕೆ ವರ್ಣರಂಜಿತ ಚಾಲನೆ

Published:
Updated:
ಚಳಿಗಾಲದ ಒಲಿಂಪಿಕ್‌ ಕೂಟಕ್ಕೆ ವರ್ಣರಂಜಿತ ಚಾಲನೆ

ಪ್ಯೊಂಗ್‌ಯಾಂಗ್‌: ಮನುಷ್ಯ ಹಾಗೂ ದೇಶಗಳ ನಡುವೆ ದ್ವೇಷ ಮರೆತು ಸಂಬಂಧ ಗಟ್ಟಿಗೊ ಳಿಸುವ ಶಕ್ತಿ ಕ್ರೀಡೆಗಿದೆ ಎಂಬ ಮಾತು ಇಲ್ಲಿ ನಡೆಯುತ್ತಿರುವ ಒಲಿಂಪಿಕ್ಸ್‌ ಉದ್ಘಾಟನಾ ಸಮಾರಂಭ ಸಾಕ್ಷಿಯಾಯಿತು.

ಸದಾ ಪರಸ್ಪರ ದ್ವೇಷ ಕಾರುತ್ತಿದ್ದ ಉತ್ತರ ಕೊರಿಯಾ ಹಾಗೂ ದಕ್ಷಿಣ ಕೊರಿಯಾದ ಆಟಗಾರರು, ಕ್ರೀಡಾ ಕೂಟದ ಉದ್ಘಾಟನೆಯಲ್ಲಿ ‘ಸಂಯುಕ್ತ ಕೊರಿಯಾ’ದ ಧ್ವಜದ ಅಡಿಯಲ್ಲಿ ಮೆರವಣಿಗೆಯಲ್ಲಿ ಪಾಲ್ಗೊಂಡರು. ಈ ವೇಳೆ ದಕ್ಷಿಣ ಕೊರಿಯಾದ ಅಧ್ಯಕ್ಷ ಮೂನ್‌ ಜೆ–ಇನ್‌ ಹಾಗೂ ಉತ್ತರ ಕೊರಿಯಾ ಅಧ್ಯಕ್ಷ ಕಿಮ್‌ ಜಾಂಗ್‌ ಉನ್‌ ಸಹೋದರಿ ಕಿಮ್‌ ಯೊ ಜೊಂಗ್‌ ಪರಸ್ಪರ ಹತ್ತಿರ ನಿಂತು ಚಪ್ಪಾಳೆ ತಟ್ಟಿ ತಂಡವನ್ನು ಸ್ವಾಗತಿಸಿದ್ದು ಕಂಡುಬಂತು.

(ಮೆರವಣಿಗೆಯಲ್ಲಿ ತ್ರಿವರ್ಣಧ್ವಜ ಹಿಡಿದು ಸಾಗಿಬಂದ ಭಾರತದ ಕ್ರೀಡಾಪಟು ಶಿವ ಕೇಶವನ್‌)

ಉತ್ತರ ಮತ್ತು ದಕ್ಷಿಣ ಕೊರಿಯಾದ ಹಾಕಿ ತಂಡದ ಆಟಗಾರರಾದ ಪಾರ್ಕ್‌ ಜೊಂಗ್‌–ಅಹ್‌ , ಚುಂಗ್‌ ಸು ಹ್ಯೊನ್‌ ಅವರು ಕ್ರೀಡಾಜ್ಯೋತಿಯನ್ನು ಇನ್ಲಿ ಪಾರ್ಕ್‌ಗೆ  ಹೊತ್ತುತಂದರು. ದಕ್ಷಿಣ ಕೊರಿಯಾದ ಸ್ಕೇಟರ್‌ ಚಾಂಪಿಯನ್‌ ‘ಯುನಾ ಕಿಮ್‌’ ಅವರು ಕ್ರೀಡಾಜ್ಯೋತಿ ಬೆಳಗುವ ಮೂಲಕ ಅಧಿಕೃತ ಚಾಲನೆ ನೀಡಿದರು. ನಂತರ,ಒಲಿಂಪಿಕ್‌ ಧ್ವಜಾರೋಹಣ ನೆರವೇರಿಸಲಾಯಿತು.

ಉದ್ಘಾಟನಾ ಸಮಾರಂಭ ವೇಳೆ ಇಡೀ ಕ್ರೀಡಾಂಗಣ ವಿದ್ಯುತ್‌ ದೀಪಗಳಿಂದ ಜಗಮಗಿಸಿತು. ಬಾಣ–ಬಿರುಸುಗಳು ಆಗಸದಲ್ಲಿ ಚಿತ್ರಾರ ಬಿಡಿಸಿದವು.

ಶಿವಕೇಶವನ್‌ ಅವರು ಭಾರತದ ಧ್ವಜ ಹಿಡಿದು ಮೆರವಣಿಗೆಯಲ್ಲಿ ಸಾಗಿ ದರು. ಕಲಾವಿದರು, ಕ್ರೀಡಾ ಕೂಟದ ಚಾಲನೆಗೆ ಮೆರುಗು ನೀಡಿದರು.

ರಷ್ಯಾದ ಧ್ವಜವಿಲ್ಲ: ‌ಉದ್ದೀಪನ ಮದ್ದು ಸೇವನೆ ಪ್ರಕರಣದಲ್ಲಿ ರಷ್ಯಾದ ಕ್ರೀಡಾಕೂಟಗಳು ಸಿಕ್ಕಿಬಿದ್ದಿರುವುದರಿಂದ ಒಲಿಂಪಿಕ್ಸ್‌ ಧ್ವಜ ಹಿಡಿದು ಸಾಗಿದರು. ‘ನಾಲ್ಕು ವರ್ಷದ ಹಿಂದೆ ಪದಕ ಗೆಲ್ಲಲು ಕ್ರೀಡಾಪಟುಗಳಿಗೆ ರಷ್ಯಾ ಸರ್ಕಾರವೇ ಪರೋಕ್ಷ ಬೆಂಬಲ ನೀಡಿದ ಕಾರಣಕ್ಕಾಗಿ ಈ ರೀತಿ ಶಿಕ್ಷಿಸಲಾಗಿದೆ’ ಎಂದು ಒಲಿಂಪಿಕ್ಸ್‌ ಸಮಿತಿಯೂ ತನ್ನ ಕ್ರಮವನ್ನು ಸಮರ್ಥಿಸಿಕೊಂಡಿದೆ.

(ಉದ್ಘಾಟನೆ ವೇಳೆ ಒಲಿಂಪಿಕ್ಸ್‌ ಜ್ಯೋತಿ ಉದ್ಘಾಟಿಸಲಾಯಿತು)

* ಇವನ್ನೂ ಓದಿ...

* ಚಳಿಗಾಲದ ಒಲಿಂಪಿಕ್‌ ಕೂಟ ಇಂದಿನಿಂದ

ಪ್ರತಿಕ್ರಿಯಿಸಿ (+)