ಶಾಲಾ ಮೈದಾನದಲ್ಲಿ ನೃತ್ಯ, ತಾರಸಿಯಲ್ಲಿ ಪರೀಕ್ಷೆ

7

ಶಾಲಾ ಮೈದಾನದಲ್ಲಿ ನೃತ್ಯ, ತಾರಸಿಯಲ್ಲಿ ಪರೀಕ್ಷೆ

Published:
Updated:

ಭೋಪಾಲ್‌: ಮಧ್ಯಪ್ರದೇಶದ ಟೀಕಮ್ಗಡದ ಸರ್ಕಾರಿ ಶಾಲೆಯೊಂದರಲ್ಲಿ ವಿದ್ಯಾರ್ಥಿಗಳನ್ನು ತಾರಸಿ ಮೇಲೆ ಕೂರಿಸಿ ವಾರ್ಷಿಕ ಪರೀಕ್ಷೆ ಬರೆಸಲಾಗಿದೆ. ಶಾಲೆಯಲ್ಲಿ ಪರೀಕ್ಷೆ ನಡೆಯುತ್ತಿದ್ದಾಗಲೇ ಸಾಂಸ್ಕೃತಿಕ ಕಾರ್ಯಕ್ರಮವೊಂದನ್ನು ಸ್ಥಳೀಯ ಶಾಸಕರು ನಡೆಸಿದ್ದು ಇದಕ್ಕೆ ಕಾರಣ.

ಹೂವಿನ ಹಾರ, ಬಲೂನುಗಳಿಂದ ಅಲಂಕರಿಸಲಾದ ಶಾಲೆಯ ಮೈದಾನದಲ್ಲಿ ಮಹಿಳೆಯರಿಬ್ಬರು ನೃತ್ಯ ಮಾಡುತ್ತಿರುವ ಹಾಗೂ ಜನರ ಗುಂಪು ಅರಚುತ್ತಿರುವ ವಿಡಿಯೊ ಹರಿದಾಡುತ್ತಿದೆ. ಮತ್ತೊಂದೆಡೆ ತಾರಸಿಯಲ್ಲಿ ವಿದ್ಯಾರ್ಥಿಗಳು ಸಾಲಾಗಿ ಕುಳಿತಿದ್ದಾರೆ. ಆದರೆ ಪರೀಕ್ಷೆ ಬರೆಯಲು ಅವರು ಒದ್ದಾಡುತ್ತಿರುವುದು ವಿಡಿಯೊದಲ್ಲಿ ಸ್ಪಷ್ಟವಾಗಿ ತಿಳಿಯುತ್ತಿದೆ.

ಜಿಲ್ಲಾಡಳಿತಕ್ಕೆ ಈ ಪ್ರಕರಣದ ಕುರಿತು ಮಾಹಿತಿ ಇಲ್ಲ. ‘ಯಾವುದೇ ದೂರು ಬಂದಿಲ್ಲ’ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.

ಕಳೆದ ವರ್ಷ ಉತ್ತರ ಪ್ರದೇಶದ ಮಿರ್ಜಾಪುರದ ಸರ್ಕಾರಿ ಶಾಲೆಯೊಂದರಲ್ಲಿ ಮಹಿಳೆಯರು ಭೋಜಪುರಿ ಗೀತೆಗಳಿಗೆ ನೃತ್ಯ ಮಾಡಿದ ಹಾಗೂ ಪುರುಷರು ಅವರ ಮೇಲೆ ನೋಟುಗಳನ್ನು ಎಸೆದ ಪ್ರಕರಣ ನಡೆದಿತ್ತು. ಆದರೆ ಈ ವೇಳೆ ರಕ್ಷಾ ಬಂಧನಕ್ಕಾಗಿ ಶಾಲೆಗೆ ರಜೆ ನೀಡಲಾಗಿತ್ತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry