ಶುಕ್ರವಾರ, ಡಿಸೆಂಬರ್ 6, 2019
24 °C

ಕಾಯ್ದಿರಿಸದ ಟಿಕೆಟ್‌ ಖರೀದಿಗೆ ಮೊಬೈಲ್‌ ಆ್ಯಪ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಾಯ್ದಿರಿಸದ ಟಿಕೆಟ್‌ ಖರೀದಿಗೆ ಮೊಬೈಲ್‌ ಆ್ಯಪ್‌

ಬೆಳಗಾವಿ: ಕಾಯ್ದಿರಿಸದ ಟಿಕೆಟ್‌ಗಳನ್ನು ಮೊಬೈಲ್‌ ಮೂಲಕ ಖರೀದಿಸಲು ಅನುಕೂಲವಾಗುವ ‘ಯುಟಿಎಸ್‌’ (UTS) ಮೊಬೈಲ್‌ ಆ್ಯಪ್‌ಗೆ ರೈಲ್ವೆ ಸಚಿವ ಪಿಯೂಷ್‌ ಗೋಯಲ್‌ ಶನಿವಾರ ಇಲ್ಲಿ ಚಾಲನೆ ನೀಡಿದರು.

‘ಈ ಆ್ಯಪ್‌ ಅನ್ನು ಮೊಬೈಲ್‌ನಲ್ಲಿ ಡೌನ್‌ಲೋಡ್‌ ಮಾಡಿಕೊಂಡು ಪ್ರಯಾಣದ ಟಿಕೆಟ್‌, ಪ್ಲಾಟ್‌ಫಾರಂ ಟಿಕೆಟ್‌ ಹಾಗೂ ವಿಶೇಷ ಸಂದರ್ಭಗಳ (ಸೀಸನಲ್‌) ಟಿಕೆಟ್‌ಗಳನ್ನು ಖರೀದಿಸಬಹುದು. ಇದರಿಂದ ಪ್ರಯಾಣಿಕರ ಸಮಯ ಉಳಿತಾಯವಾಗುತ್ತದೆ’ ಎಂದು ಅವರು ಹೇಳಿದರು.

ಪ್ರಸ್ತುತ ಟಿಕೆಟ್‌ಗಳನ್ನು ರೈಲ್ವೆ ಇಲಾಖೆಯ ಅಧಿಕೃತ ವೆಬ್‌ಸೈಟ್‌ ಐಆರ್‌ಸಿಟಿಸಿ ಮೂಲಕ ಕಾಯ್ದಿರಿಸಲಾಗುತ್ತದೆ. ರೈಲು ಹೊರಡುವ ದಿನ ನೀಡಲಾಗುತ್ತಿದ್ದ ಕಾಯ್ದಿರಿಸದ ಟಿಕೆಟ್‌ಗಳನ್ನು ಪಡೆಯಲು ಇದುವರೆಗೆ ಆನ್‌ಲೈನ್‌ನಲ್ಲಿ ಅವಕಾಶವಿರಲಿಲ್ಲ. ಟಿಕೆಟ್‌ ಕೌಂಟರ್‌ಗೆ ಹೋಗಿಯೇ ತೆಗೆದುಕೊಳ್ಳಬೇಕಾಗಿತ್ತು. ಇದನ್ನು ತಪ್ಪಿಸುವ ಉದ್ದೇಶದಿಂದ ಆ್ಯಪ್‌ ಅಭಿವೃದ್ಧಿಪಡಿಸಲಾಗಿದೆ ಎಂದು ಸಚಿವರು ತಿಳಿಸಿದರು.

ಸಿಆರ್‌ಐಎಸ್‌ ಕಂಪನಿಯು ಈ ಆ್ಯಪ್‌ ಅನ್ನು ಅಭಿವೃದ್ಧಿಪಡಿಸಿದೆ. ಇದನ್ನು ಡೌನ್‌ಲೋಡ್‌ ಮಾಡಿಕೊಂಡು ನೆಟ್‌ ಬ್ಯಾಂಕಿಂಗ್‌, ಡೆಬಿಟ್‌ ಕಾರ್ಡ್‌, ಕ್ರೆಡಿಟ್‌ ಕಾರ್ಡ್‌ ಮೂಲಕ ಹಣ ಪಾವತಿಸಿ ಟಿಕೆಟ್‌ಗಳನ್ನು ಖರೀದಿಸಬಹುದು ಎಂದರು.

ಪ್ರತಿಕ್ರಿಯಿಸಿ (+)