ಅಯ್ಯಪ್ಪಸ್ವಾಮಿ ದೇವಸ್ಥಾನದ ಗರುಡಗಂಭ ಪ್ರತಿಷ್ಠಾಪನೆ

7

ಅಯ್ಯಪ್ಪಸ್ವಾಮಿ ದೇವಸ್ಥಾನದ ಗರುಡಗಂಭ ಪ್ರತಿಷ್ಠಾಪನೆ

Published:
Updated:

ಬೆಂಗಳೂರು: ಮಹದೇವಪುರ ಕ್ಷೇತ್ರದ ವರ್ತೂರು ಗ್ರಾಮದಲ್ಲಿ ಅಯ್ಯಪ್ಪಸ್ವಾಮಿ ದೇವಸ್ಥಾನದಲ್ಲಿ ಗರುಡಗಂಭ ಹಾಗೂ ಬಲಿ ಪೀಠಗಳ ಪ್ರತಿಷ್ಠಾಪನಾ ಕಾರ್ಯಕ್ರಮ ಶನಿವಾರ ನಡೆಯಿತು.

ಬೆಳಿಗ್ಗೆ 6ಕ್ಕೆ ವಿಶೇಷ ಪೂಜೆಗಳು ನಡೆದವು. 8.40ಕ್ಕೆ ನಾಗದೇವತೆಗಳ ಪ್ರತಿಷ್ಠಾಪನೆ, ಬಲಿ ಪೀಠ, ಗರುಡಗಂಭ ಪ್ರತಿಷ್ಠಾಪನೆ ಮಾಡಲಾಯಿತು. ಬಳಿಕ ಕುಂಭಾಭಿಷೇಕ ನಡೆಯಿತು.

ವರ್ತೂರು, ಮಧುರಾನಗರ, ಸೊರಹುಣಸೆ, ಬೆಳ್ಳಿಕೆರೆ, ಮುತ್ಸಂದ್ರ, ರಾಮಗೊಂಡನಹಳ್ಳಿ, ಬಳಗೆರೆ, ಪಣತ್ತೂರು ಹಾಗೂ ಗುಂಜೂರು ಗ್ರಾಮದ ನೂರಾರು ಭಕ್ತರು ಪಾಲ್ಗೊಂಡಿದ್ದರು. ಎಲ್ಲರಿಗೂ ಅನ್ನಸಂತರ್ಪಣೆ ಮಾಡಲಾಯಿತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry