ಸೇಂಟ್ ಮೊರ್ಟಿಜ್, ಸ್ವಿಟ್ಜರ್‌ಲೆಂಡ್: ಪಾಕಿಸ್ತಾನದ ಕ್ರಿಕೆಟಿಗ ಶಾಹೀದ್ ಆಫ್ರಿದಿ ಭಾರತದ ಕ್ರಿಕೆಟ್ ಅಭಿಮಾನಿಗಳ ಜತೆಗೆ ತ್ರಿವರ್ಣಧ್ವಜದ ಮುಂದೆ ನಿಂತು ಸೆಲ್ಫಿ ತೆಗೆಸಿಕೊಳ್ಳುವ ಮೂಲಕ ಅಭಿಮಾನಿಗಳ ಮನಗೆದ್ದರು.

ಸೇಂಟ್ ಮೇರಿಸ್ ಕೆರೆ ಬದಿಯಲ್ಲಿ ನಡೆಯುತ್ತಿರುವ ಐಸ್ ಕ್ರಿಕೆಟ್ ಚಾಲೆಂಜ್ ಪಂದ್ಯದಲ್ಲಿ ಸೆಹ್ವಾಗ್ ನೇತೃತ್ವದ ಪ್ಯಾಲೇಸ್ ತಂಡದ ಎದುರು ಆಫ್ರಿದಿ ನೇತೃತ್ವದ ರಾಯಲ್ಸ್ ತಂಡವು ಮುನ್ನಡೆ ಕಾಯ್ದುಕೊಂಡಿತ್ತು. ಈ ವೇಳೆ ಆಫ್ರಿದಿ ಅವರನ್ನು ಸುತ್ತುವರಿದ ಅಭಿಮಾನಿಗಳು ಅವರ ಜತೆಗೆ ಚಿತ್ರ ತೆಗೆಸಿಕೊಳ್ಳಲು ಮುಗಿಬಿದ್ದರು. ಈ ವೇಳೆ ಭಾರತದ ಯುವತಿಯೊಬ್ಬಳು ಸೆಲ್ಫಿಗಾಗಿ ಮನವಿ ಮಾಡಿದಳು. ಆದರೆ ಆಕೆ ಭಾರತದ ತ್ರಿವರ್ಣಧ್ವಜವನ್ನು ಕೈಯಲ್ಲಿ ಮಡಚಿ ಇಟ್ಟುಕೊಂಡಿದ್ದನ್ನು ಆಫ್ರಿದಿ ಗಮನಿಸಿದರು.

ನಂತರ ಧ್ವಜವನ್ನು ಪೂರ್ತಿಯಾಗಿ ಬಿಚ್ಚಿ, ಗೌರವಯುತವಾಗಿ ಹಿಡಿಯುವಂತೆ ಸೂಚಿಸಿದ ಅವರು, ಆಕೆಯ ಜತೆ ಚಿತ್ರ ತೆಗೆಸಿಕೊಂಡರು. ಆಫ್ರಿದಿ ಅವರ ಈ ನಡವಳಿಕೆಯೂ ಸಾಕಷ್ಟು ಮೆಚ್ಚುಗೆ ವ್ಯಕ್ತವಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಈ ವಿಡಿಯೊ ವೈರಲ್ ಆಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.