ಸೋಮವಾರ, ಡಿಸೆಂಬರ್ 9, 2019
25 °C

ತುರುವೇಕೆರೆ: ಜೆಡಿಎಸ್ ಶಾಸಕರ ಬೆಂಬಲಿಗರಿಂದ ಗ್ರಾಮಸ್ಥರ ಮೇಲೆ ಹಲ್ಲೆ

Published:
Updated:
ತುರುವೇಕೆರೆ: ಜೆಡಿಎಸ್ ಶಾಸಕರ ಬೆಂಬಲಿಗರಿಂದ ಗ್ರಾಮಸ್ಥರ ಮೇಲೆ ಹಲ್ಲೆ

ತುರುವೇಕೆರೆ:  ತಾಲ್ಲೂಕಿನ ಅಮ್ಮಸಂದ್ರ ಬಿರ್ಲಾ ಸರ್ಕಲ್ ನಲ್ಲಿ ಜೆಡಿಎಸ್ ಕಾರ್ಯಕರ್ತರು ಮತ್ತು ಚಾಕುವಳ್ಳಿ ಗ್ರಾಮಸ್ಥರ ನಡುವೆ ಹೊಡೆದಾಟ ನಡೆದಿದೆ.

ಜೆಡಿಎಸ್ ಕಾರ್ಯಕರ್ತರ  ಮನೆ ಮನೆಗೆ ಕುಮಾರಣ್ಣ ಚುನಾವಣಾ ಪ್ರಚಾರದ ವೇಳೆ ಈ ಘಟನೆ ನಡೆದಿದೆ. ಶಾಸಕ ಎಂ.ಟಿ ಕೃಷ್ಣಪ್ಪ ಬೆಂಬಲಿಗರಿಗೆ ಚಾಕುವಳ್ಳಿ ಗ್ರಾಮದ ಕೆಲವರು ಗ್ರಾಮದ ಅಭಿವೃದ್ಧಿ ಬಗ್ಗೆ ಪ್ರಶ್ನೆ ಮಾಡಿದಕ್ಕೆ  ಆ ಗ್ರಾಮಸ್ಥರಿಗೆ  ಜೆಡಿಎಸ್ ಕಾರ್ಯಕರ್ತರು ಹಲ್ಲೆ ನಡೆಸಿದ್ದಾರೆ ಎಂದು ತಿಳಿದಿದೆ.

ದಂಡಿನಶಿವರ ಪೊಲೀಸರು  ಮಧ್ಯ ಪ್ರವೇಶಿಸಿ ಪರಿಸ್ಥಿತಿ ತಿಳಿಗೊಳಿಸಿದ್ದಾರೆ. 

ಘಟನೆ ಬಳಿಕ ಕಾಂಗ್ರೆಸ್ ಮತ್ತು ಬಿಜೆಪಿ ಕಾರ್ಯಕರ್ತರು ಜೆಡಿಎಸ್ ಶಾಸಕ ಎಂ.ಟಿ.ಕೃಷ್ಣಪ್ಪ ಬೆಂಬಲಿಗರ ದಬ್ಬಾಳಿಕೆ ಖಂಡಿಸಿ ಅಮ್ಮಸಂದ್ರ ಬಿರ್ಲಾ ಸರ್ಕಲ್ ನಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ.

ಪ್ರತಿಕ್ರಿಯಿಸಿ (+)