ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಿಟರ್ನ್ಸ್‌: ವರ್ತಕರ ಅಭಿಪ್ರಾಯ ಸಂಗ್ರಹ

Last Updated 11 ಫೆಬ್ರುವರಿ 2018, 19:30 IST
ಅಕ್ಷರ ಗಾತ್ರ

ನವದೆಹಲಿ: ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ವ್ಯವಸ್ಥೆಯಲ್ಲಿ ರಿಟರ್ನ್ಸ್‌ ಸಲ್ಲಿಕೆ ಸರಳಗೊಳಿಸಲು ರಚನೆ ಮಾಡಿರುವ ಸಮಿತಿಯು ಈ ವಾರ ವರ್ತಕರು ಮತ್ತು ಉದ್ಯಮಿಗಳ ಅಭಿಪ್ರಾಯ ಸಂಗ್ರಹಿಸಲಿದೆ.

ರಿಟರ್ನ್ಸ್‌ ಸಲ್ಲಿಕೆ ಪ್ರಕ್ರಿಯೆ ಸರಳಗೊಳಿಸುವುದಕ್ಕೆ ಸಂಬಂಧಿಸಿದಂತೆ ಜಿಎಸ್‌ಟಿಎನ್‌ ಅಧ್ಯಕ್ಷ ಅಜಯ್‌ ಭೂಷನ್‌ ಪಾಂಡೆ ನೇತೃತ್ವದ ಸಮಿತಿ ಅಭಿಪ್ರಾಯ ಸಂಗ್ರಹಿಸಿ ಜಿಎಸ್‌ಟಿಎನ್‌ ತಾಂತ್ರಿಕ ಸಮಿತಿಗೆ ವರದಿ ಸಲ್ಲಿಸಲಿದೆ.

‘ವರದಿಯನ್ನು ಈ ತಿಂಗಳ ಒಳಗೆ ಅಂತಿಮಗೊಳಿಸಿ ಜಿಎಸ್‌ಟಿ ಮಂಡಳಿಗೆ ನೀಡಲಾಗುವುದು’ ಎಂದು ಪಾಂಡೆ ತಿಳಿಸಿದ್ದಾರೆ.

ಜಿಎಸ್‌ಟಿಆರ್–3ಬಿ ಸಲ್ಲಿಕೆಗೆ ಇರುವ ತಾಂತ್ರಿಕ ಸಮಸ್ಯೆ ಬಗ್ಗೆ ವರದಿ ನೀಡಲು ನವೆಂಬರ್‌ನಲ್ಲಿ ಸಮಿತಿ ರಚನೆ ಮಾಡಲಾಗಿತ್ತು. ಹೀಗಾಗಿ ಆದಷ್ಟೂ ಬೇಗನೆ ವ್ಯವಸ್ಥೇಯನ್ನು ಸರಳಗೊಳಿಸುವ ಪ್ರಕ್ರಿಯೆ ಆರಂಭವಾಗಿದೆ.

₹ 1.5 ಕೋಟಿವರೆಗೆ ವಹಿವಾಟು ನಡೆಸುವವರು ಮೂರು ತಿಂಗಳಿಗೆ ಒಮ್ಮೆ ಜಿಎಸ್‌ಟಿಆರ್‌–1 ಸಲ್ಲಿಸಬೇಕು.

₹ 1.5 ಕೋಟಿಗೂ ಅಧಿಕ ವಹಿವಾಟು ನಡೆಸುವವರು ಮುಂದಿನ ತಿಂಗಳು 10ನೇ ತಾರೀಕಿನ ಒಳಗೆ ರಿಟರ್ನ್‌ ಸಲ್ಲಿಸಬೇಕು.

ಟ್ವೀಟರ್‌ ನಿರ್ವಹಣೆಗೆ 8 ಅಧಿಕಾರಿಗಳು
ಟ್ವೀಟರ್‌ನಲ್ಲಿ ಜಿಎಸ್‌ಟಿಗೆ ಸಂಬಂಧಿಸಿದ ದೂರುಗಳ ನಿರ್ವಹಣೆಗಾಗಿ 8 ತೆರಿಗೆ ಅಧಿಕಾರಿಗಳನ್ನು ನೇಮಿಸಲಾಗಿದೆ. ಈ ಎಂಟೂ ಮಂದಿ ಉಪವಿಭಾಗಾಧಿಕಾರಿಗಳಾಗಿದ್ದಾರೆ.

ಸಾಮಾಜಿಕ ಜಾಲತಾಣಗಳಲ್ಲಿ ಜಿಎಸ್‌ಟಿಗೆ ಸಂಬಂಧಿಸಿದಂತೆ ಹೆಚ್ಚಿನ ಸಂಖ್ಯೆಯಲ್ಲಿ ಪ್ರಶ್ನೆಗಳು ಬರುತ್ತಿವೆ. ಹೀಗಾಗಿ ಅಧಿಕಾರಿಗಳನ್ನು ನೇಮಿಸುವ ನಿರ್ಧಾರಕ್ಕೆ ಬರಲಾಯಿತು ಎಂದು ಹಣಕಾಸು ಸಚಿವಾಲಯದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT