7

ಜಾಗೃತಿಗೆ ಸಕಾಲ

Published:
Updated:

‘ಮನುಷ್ಯನ ಜೊತೆ ರಾಜಿಗೆ ನಿಸರ್ಗ ಒಪ್ಪುವುದೇ?’ (ಪ್ರ.ವಾ., ‘ಆಳ–ಅಗಲ’, ಫೆ. 10) ವರದಿ ಸಕಾಲಿಕ. ದಕ್ಷಿಣ ಆಫ್ರಿಕಾದ ಕೇಪ್‌ಟೌನ್ ನಗರದ ನೀರಿನ ಬವಣೆ ಇಡೀ ವಿಶ್ವಕ್ಕೆ ಒಂದು ಎಚ್ಚರಿಕೆ ಗಂಟೆ. ಇದೇ ಪರಿಸ್ಥಿತಿ ಪ್ರಪಂಚದ ಇತರ ನಗರಗಳಲ್ಲಿಯೂ ಉಂಟಾಗುವ ಸಾಧ್ಯತೆ ಇದೆ.

ಮುಂದಿನ ಪೀಳಿಗೆಗೆ ಈಗಿನಿಂದಲೇ ನೀರಿನ ಮಹತ್ವ, ಅದರ ಕೊರತೆಯಿಂದಾಗುವ ಪರಿಣಾಮಗಳು, ಜತನದಿಂದ ಅದರ ಉಪಯೋಗಿಸುವಿಕೆ ಬಗ್ಗೆ ಮನ

ದಟ್ಟು ಮಾಡಬೇಕಾದ ಜವಾಬ್ದಾರಿ ಎಲ್ಲರ ಮೇಲೂ ಇದೆ. ನಾವೇ ಮಾಡಿಕೊಂಡಿರುವ ಗಡಿರೇಖೆಗಳನ್ನು ಮೀರಿ, ಮನುಷ್ಯತ್ವದ ದೃಷ್ಟಿಯಿಂದ ಯಾರಿಗೂ ತೊಂದರೆಯಾಗದಂತೆ ನೀರನ್ನು ಸಮವಾಗಿ ಹಂಚಿಕೊಂಡರೆ ಎಷ್ಟೋ ಸಮಸ್ಯೆಗಳು ತಾವಾಗಿಯೇ ಬಗೆಹರಿಯಲಿವೆ.

–ವಿ.ವಿಜಯೇಂದ್ರ ರಾವ್, ಬೆಂಗಳೂರು

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry