ಬುಧವಾರ, ಡಿಸೆಂಬರ್ 11, 2019
24 °C

ಎಲ್ಲ ಜಿಲ್ಲೆಗಳಲ್ಲೂ ಮೋದಿ ಭಾಷಣ?

Published:
Updated:
ಎಲ್ಲ ಜಿಲ್ಲೆಗಳಲ್ಲೂ ಮೋದಿ ಭಾಷಣ?

ಬೆಂಗಳೂರು: ರಾಜ್ಯದ ಗದ್ದುಗೆ ಹಿಡಿಯಲು ಶತಾಯಗತಾಯ ಪ್ರಯತ್ನಿಸುತ್ತಿರುವ ಬಿಜೆಪಿ, ಎಲ್ಲ  ಜಿಲ್ಲೆಗಳಿಗೂ ಪ್ರಧಾನಿ ನರೇಂದ್ರ ಮೋದಿ ಅವರನ್ನು ಕರೆತಂದು ಭಾಷಣ ಮಾಡಿಸುವಂತೆ ಕೇಂದ್ರ ಕಚೇರಿಗೆ ಪ್ರಸ್ತಾವ ಕಳುಹಿಸಿದೆ.

ಸದ್ಯಕ್ಕೆ ಪ್ರಧಾನಿ ಭಾಗವಹಿಸುವ ನಾಲ್ಕು ಕಾರ್ಯಕ್ರಮಗಳು ಮಾತ್ರ ಖಚಿತವಾಗಿವೆ. ಈ ತಿಂಗಳು 19ಕ್ಕೆ ಮೈಸೂರು ಹಾಗೂ 27ಕ್ಕೆ ದಾವಣಗೆರೆಗೆ ಅವರು ಭೇಟಿ ನೀಡಲಿದ್ದಾರೆ. ಮಾರ್ಚ್ 4ರಂದು ವಿಜಯ‍ಪುರ ಹಾಗೂ 13ರಂದು ರಾಯಚೂರಿಗೆ ಆಗಮಿಸಲಿದ್ದಾರೆ.

‘15ರಿಂದ 20 ಕಡೆಗಳಲ್ಲಿ ಪ್ರಧಾನಿ ಭಾಷಣ ಮಾಡಲು ಒಪ್ಪಿಗೆ ಕೊಡುವ ಸಾಧ್ಯತೆಯಿದೆ’ ಎಂದೂ ಮೂಲಗಳು ತಿಳಿಸಿವೆ.

ಪ್ರತಿಕ್ರಿಯಿಸಿ (+)