ಗುರುವಾರ , ಡಿಸೆಂಬರ್ 12, 2019
25 °C

₹2 ಸಾವಿರ ಮುಖಬೆಲೆಯ 500 ನಕಲಿ ನೋಟುಗಳು ಪತ್ತೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

₹2 ಸಾವಿರ ಮುಖಬೆಲೆಯ 500  ನಕಲಿ ನೋಟುಗಳು ಪತ್ತೆ

ಇಳಕಲ್‌ (ಬಾಗಲಕೋಟೆ ಜಿಲ್ಲೆ): ಇಲ್ಲಿಯ ಗೋರಬಾಳ ನಾಕಾ ಸಮೀಪದ ಹಿರೇಹಳ್ಳದಲ್ಲಿ ಭಾನುವಾರ ₹2 ಸಾವಿರ ಮುಖಬೆಲೆಯ 500 ನಕಲಿ ನೋಟುಗಳು ಪತ್ತೆಯಾಗಿದ್ದು, ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಕೆಲವರು, ಹಳ್ಳದಲ್ಲಿ ಬಿದ್ದಿದ್ದ ನೋಟುಗಳನ್ನು ಒಯ್ಯಲು ಮುಂದಾಗಿದ್ದರು. ಅದು ನಕಲಿ ಎಂದು ಗೊತ್ತಾದ ಮೇಲೆ ಅಲ್ಲಿಯೇ ಬಿಸಾಕಿಹೋದರು. ಇನ್ನು ಕೆಲವರು ನೋಟುಗಳಿಗೆ ಬೆಂಕಿ ಹಚ್ಚಲು ಮುಂದಾಗಿದ್ದರು. ಅದೇ ವೇಳೆ ಸ್ಥಳಕ್ಕೆ ಬಂದ ಇಳಕಲ್ ನಗರ ಪೊಲೀಸರು ನಕಲಿ ನೋಟುಗಳನ್ನು ವಶಕ್ಕೆ ಪಡೆದಿದ್ದು, ತನಿಖೆ ಕೈಗೊಂಡಿದ್ದಾರೆ.

ಪ್ರತಿಕ್ರಿಯಿಸಿ (+)