4

ಹಿಂಬದಿ ಕಾಣುವ ಕನ್ನಡಿಯಲ್ಲಿ ಹಗರಣಗಳ ಸರಮಾಲೆ: ರಾಹುಲ್‌ ಮಾತಿಗೆ ಬಿಜೆಪಿ ವ್ಯಂಗ್ಯ

Published:
Updated:
ಹಿಂಬದಿ ಕಾಣುವ ಕನ್ನಡಿಯಲ್ಲಿ ಹಗರಣಗಳ ಸರಮಾಲೆ: ರಾಹುಲ್‌ ಮಾತಿಗೆ ಬಿಜೆಪಿ ವ್ಯಂಗ್ಯ

ಬೆಂಗಳೂರು: ‘ಹಿಂಬದಿ ಕಾಣುವ ಕನ್ನಡಿ ಇಲ್ಲದೆಯೇ ರಾಹುಲ್‌ ಸವಾರಿ ಮಾಡುತ್ತಿದ್ದಾರೆ. ಅವರಿಗೆ ಬೋಫೋರ್ಸ್‌, 2ಜಿ, ಕೋಲ್‌ಜಿ, ದಾಮಾದ್‌ಜಿ ಕಾಣುವ ಇಚ್ಛೆ ಇಲ್ಲ’ ಎಂದು  ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಅನಂತಕುಮಾರ್‌ ಟ್ವೀಟಿಸಿದ್ದಾರೆ.

‘ಪ್ರಧಾನಿ ನರೇಂದ್ರ ಮೋದಿ ಅವರು ಬೌಲರ್‌ ನೋಡಿ ಬ್ಯಾಟಿಂಗ್ ಮಾಡುವ ಬದಲು ತಮ್ಮ ಹಿಂದೆ ಇರುವ ವಿಕೆಟ್ ಕೀಪರ್ ನೋಡಿ ಬ್ಯಾಟಿಂಗ್ ಮಾಡುತ್ತಾರೆ’ ಎಂದು ಭಾನುವಾರ ಎಐಸಿಸಿ ಅಧ್ಯಕ್ಷ ರಾಹುಲ್‌ ಗಾಂಧಿ ಟೀಕಿಸಿದ್ದರು. ಇದಕ್ಕೆ ಟ್ವಿಟರ್‌ನಲ್ಲಿ ಪ್ರತಿಕ್ರಿಯಿಸಿರುವ ಅನಂತಕುಮಾರ್‌, ರಾಹುಲ್‌ ಗಾಂಧಿ ಹಿಂದೆ ನೋಡಲು ಕನ್ನಡಿ ಇಟ್ಟುಕೊಳ್ಳದೇ ಸವಾರಿ ಮಾಡುತ್ತಿದ್ದಾರೆ. ಅವರು ಹಿಂದಿನ ಹಗರಣಗಳನ್ನು ಕಾಣುವುದರಿಂದ ತಪ್ಪಿಸಿಕೊಳ್ಳುತ್ತಿದ್ದಾರೆ ಎಂದಿದ್ದಾರೆ.

‘ಗಣಿಗಾರಿಕೆ ಕಿಂಗ್‌ಪಿನ್‌ ಶಾಸಕ ನಾಗೇಂದ್ರ ರಾಹುಲ್‌ ಗಾಂಧಿ ಹಿಂದೆಯೇ ಕುಳಿತಿದ್ದರು. ರಾಹುಲ್‌ ಗಾಂಧಿ ಕಾರ್ಯಕ್ರಮದಲ್ಲಿ ಹಿಂಬದಿಯ ಕನ್ನಡಿಯಲ್ಲಿ ನೋಡದಂತೆ ಪದೇ ಪದೇ ಹೇಳುತ್ತಿದ್ದರು. ಅದು ಯಾಕೆಂದು ಈಗ ಅರ್ಥವಾಯಿತು’ ಎಂದು ರಾಜ್ಯ ಬಿಜೆಪಿ ಘಟಕ ಟ್ವೀಟ್‌ ಮೂಲಕ ಟೀಕಿಸಿದೆ.

'ರಾಹುಲ್ ಗಾಂಧಿಯವರು ದೇವಸ್ಥಾನ ಭೇಟಿ ಮಾಡಿ ಹೊರಗಡೆ ಬರುವಾಗ ಪಕ್ಕದಲ್ಲಿರುವವರು ಹೇಳಿದ್ದರಂತೆ, ದೇವರಿಗೆ  ಬೆನ್ನು  ತೋರಿಸ್ಕ್ಕೊಂಡು ಹೊರಗಡೆ ಬರಬಾರದು ಅಂತ. ಹೆಚ್ಚಿನಂಶ ಮಹಾನುಭಾವರು ಬಸ್ಸಿನಲ್ಲಿದ್ದ ದೇವರ ಫೋಟೋ ನೋಡಿ ಹೀಗೆ ಇಳಿದಿರಬೇಕು ದೇವಸ್ಥಾನಕ್ಕೂ ಬಸ್ ಗೂ ವ್ಯತ್ಯಾಸ ಗೊತ್ತಿಲ್ಲ' ಎಂದು ರಾಹುಲ್‌ ಅವರ ವಿಡಿಯೊ ಕುರಿತು ಕೇಂದ್ರ ಸಚಿವ ವ್ಯಂಗ್ಯವಾಡಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry