ಗಡಿಯಲ್ಲಿ ಪಾಕಿಸ್ತಾನದ ಬಿಎಟಿಯಿಂದಿ ದಾಳಿ: ಇಬ್ಬರು ಯೋಧರಿಗೆ ಗಾಯ

7

ಗಡಿಯಲ್ಲಿ ಪಾಕಿಸ್ತಾನದ ಬಿಎಟಿಯಿಂದಿ ದಾಳಿ: ಇಬ್ಬರು ಯೋಧರಿಗೆ ಗಾಯ

Published:
Updated:
ಗಡಿಯಲ್ಲಿ ಪಾಕಿಸ್ತಾನದ ಬಿಎಟಿಯಿಂದಿ ದಾಳಿ: ಇಬ್ಬರು ಯೋಧರಿಗೆ ಗಾಯ

ಶ್ರೀನಗರ: ಜಮ್ಮು ಕಾಶ್ಮೀರದ ಪೂಂಚ್ ಜಿಲ್ಲೆಯ ಖಾರಿ ಕರ್ಮರ ವಲಯದಲ್ಲಿ ಅಂತರರಾಷ್ಟ್ರೀಯ ಗಡಿ ನಿಯಂತ್ರಣ ರೇಖೆ ಬಳಿ ಪಾಕಿಸ್ತಾನದ ‘ಬಾರ್ಡರ್ ಆ್ಯಕ್ಶನ್ ಟೀಮ್’ (ಬಿಎಟಿ) ಸಿಬ್ಬಂದಿ ಸೋಮವಾರ ನಸುಕಿನಲ್ಲಿ ನಡೆಸಿದ ದಾಳಿಯಲ್ಲಿ ನಮ್ಮ ಇಬ್ಬರು ಸೈನಿಕರು ಗಾಯಗೊಂಡಿದ್ದಾರೆ.

ಒಬ್ಬ ನುಸುಳುಕೋರ ನಮ್ಮ ಸೈನಿಕರ ಗುಂಡೇಟಿಗೆ ಬಲಿಯಾಗಿದ್ದಾನೆ ಎಂದು ಅಧಿಕೃತ ಮೂಲಗಳು ತಿಳಿಸಿವೆ. ಗಾಯಗೊಂಡ ಸೈನಿಕರನ್ನು ಉಧಂಪುರದಲ್ಲಿ ಆಸ್ಪತ್ರೆಗೆ ಸೇರಿಸಲಾಗಿದೆ.

ಬಿಎಟಿ ಎಂಬುದು ಭಾರತದೊಳಕ್ಕೆ ನುಸುಳಲು ಉಗ್ರಗಾಮಿಗಳಿಗೆ ಅನುಕೂಲ ಮಾಡಿಕೊಡಲು ಪಾಕಿಸ್ತಾನ ರಚಿಸಿದ ಪಡೆ ಎಂದು ಮೂಲಗಳು ತಿಳಿಸಿವೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry