ಶುಕ್ರವಾರ, ಡಿಸೆಂಬರ್ 6, 2019
24 °C
ಸೂಪರ್‌ ಡಿವಿಷನ್‌ ಫುಟ್‌ಬಾಲ್‌ ಲೀಗ್‌ ಚಾಂಪಿಯನ್‌ಷಿಪ್‌

ಓಜೋನ್‌ ತಂಡಕ್ಕೆ ಗೆಲುವು

Published:
Updated:
ಓಜೋನ್‌ ತಂಡಕ್ಕೆ ಗೆಲುವು

ಬೆಂಗಳೂರು: ರಾಬರ್ಟ್‌ ಗಳಿಸಿದ ಮೂರು ಗೋಲುಗಳ ಬಲದಿಂದ ಓಜೋನ್‌ ಎಫ್‌ಸಿ ತಂಡದವರು ಬಿಡಿಎಫ್‌ಎ ವತಿಯ ಸೂಪರ್‌ ಡಿವಿಷನ್‌ ಲೀಗ್‌ ಫುಟ್‌ಬಾಲ್‌ ಚಾಂಪಿ ಯನ್‌ಷಿಪ್‌ನ ಪಂದ್ಯದಲ್ಲಿ ಗೆದ್ದಿದ್ದಾರೆ.

ಅಶೋಕನಗರದಲ್ಲಿರುವ ಬೆಂಗ ಳೂರು ಫುಟ್‌ಬಾಲ್‌ ಕ್ರೀಡಾಂಗಣದಲ್ಲಿ ಸೋಮವಾರ ನಡೆದ ಪಂದ್ಯದಲ್ಲಿ ಓಜೋನ್‌ 4–2 ಗೋಲುಗಳಿಂದ ಎಂಇಜಿ ಮತ್ತು ಸೆಂಟರ್‌ ಎಫ್‌ಸಿ ತಂಡವನ್ನು ಸೋಲಿಸಿತು.

ಓಜೋನ್‌ ತಂಡದ ಚಿಕ್ಕಾ 7ನೇ ನಿಮಿಷದಲ್ಲಿ ಗೋಲು ಗಳಿಸಿ ಮುನ್ನಡೆ ತಂದುಕೊಟ್ಟರು. 15ನೇ ನಿಮಿಷದಲ್ಲಿ ಎಂಇಜಿ ತಂಡದ ವಿಷ್ಣು ಚೆಂಡನ್ನು ಗುರಿ ಮುಟ್ಟಿಸಿದರು. ಆ ನಂತರ ಓಜೋನ್‌ ಆಕ್ರಮಣಕಾರಿ ಆಟ ಆಡಿತು. 18ನೇ ನಿಮಿಷದಲ್ಲಿ ಸಿಕ್ಕ ಪೆನಾಲ್ಟಿ ಕಾರ್ನರ್‌ನಲ್ಲಿ ಈ ತಂಡದ ರಾಬರ್ಟ್‌ ಗೋಲು ಬಾರಿಸಿದರು.

30ನೇ ನಿಮಿಷದಲ್ಲಿ ಓಜೋನ್‌ ತಂಡದ ಎಸ್‌.ಮನೋಜ್‌ ತಮ್ಮದೇ ಗೋಲು ಪೆಟ್ಟಿಗೆಯೊಳಗೆ ಚೆಂಡನ್ನು ಒದ್ದರು. ಆದ್ದರಿಂದ ಎಂಇಜಿ ಖಾತೆಗೆ ‘ಉಡುಗೊರೆ’ ರೂಪದಲ್ಲಿ ಗೋಲು ದಾಖಲಾಯಿತು. ಹೀಗಾಗಿ 2–2ರ ಸಮಬಲ ಸಾಧಿಸಿತು.

ಆ ನಂತರ ರಾಬರ್ಟ್‌ ಮಿಂಚಿದರು. ಅವರು 55 ಮತ್ತು 77ನೇ ನಿಮಿಷಗಳಲ್ಲಿ ಗೋಲು ಬಾರಿಸಿದರು.

‘ಎ’ ಡಿವಿಷನ್‌ ಲೀಗ್‌ ಪಂದ್ಯದಲ್ಲಿ ಬಿಯುಎಫ್‌ಸಿ, ಗೆಲುವಿನ ತೋರಣ ಕಟ್ಟಿತು. ಈ ತಂಡ 6–0 ಗೋಲುಗಳಿಂದ ರಾಯಲ್ಸ್‌ ಎಫ್‌ಸಿ ತಂಡವನ್ನು ಸೋಲಿಸಿತು. ವಿಜಯೀ ತಂಡದ ಸಿದ್ದಾರ್ಥ್‌ (9 ಮತ್ತು 78ನೇ ನಿಮಿಷ), ಲಾಲ್ಫಾಮ್‌ಕಿಮಾ (43 ಮತ್ತು 53ನೇ ನಿ.), ಜಾನ್‌ (75ನೇ ನಿ.) ಮತ್ತು ಕ್ಲಿವರ್ಟ್‌ (80+1 ನಿ.) ಗೋಲು ಗಳಿಸಿದರು.

ಪ್ರತಿಕ್ರಿಯಿಸಿ (+)