ಮಂಗಳವಾರ, ಡಿಸೆಂಬರ್ 10, 2019
26 °C

ಕಲ್ಲಂಗಡಿ ಹಣ್ಣಿಗೆ ಹೆಚ್ಚಿದ ಬೇಡಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಲ್ಲಂಗಡಿ ಹಣ್ಣಿಗೆ ಹೆಚ್ಚಿದ ಬೇಡಿಕೆ

ಹಾಸನ: ವಾರದ ಹಿಂದೆ ಮಾರುಕಟ್ಟೆಯಲ್ಲಿ ಒಂದು ಕೆ.ಜಿ. ₹ 15 ಕ್ಕೆ ಮಾರಾಟವಾಗುತ್ತಿದ್ದ ಕಲ್ಲಂಗಡಿ ಹಣ್ಣು, ಈ ವಾರ ₹ 20ಕ್ಕೆ ಮಾರಾಟವಾಗುತ್ತಿದ್ದು, ₹ 5 ಏರಿಕೆಯಾಗಿದೆ.

‘ತಮಿಳುನಾಡು ಮತ್ತು ಕೇರಳ ರಾಜ್ಯದಿಂದ ಹಾಸನ ಮಾರುಕಟ್ಟೆಗೆ ಕಲ್ಲಂಗಡಿ ಆಮದಾಗುತ್ತಿದೆ. ದಿನದಿಂದ ದಿನಕ್ಕೆ ಬಿಸಿಲಿನ ಝಳ ಏರುತ್ತಿದ್ದು, ಜನರು ದಾಹ ನೀಗಿಸಿಕೊಳ್ಳಲು ಕಲ್ಲಂಗಡಿ ಹಣ್ಣಿನ ಮೊರೆ ಹೊಗುತ್ತಿದ್ದಾರೆ.

ದಿನದಿಂದ ದಿನಕ್ಕೆ ಕಲ್ಲಂಗಡಿ ಹಣ್ಣಿಗೆ ಬೇಡಿಕೆ ಹೆಚ್ಚುತ್ತಿದೆ. ಸಹಜವಾಗಿ ಬೆಲೆಯೂ ಏರಿಕೆಯಾಗಿದೆ. ಮುಂದೆ ಇನ್ನಷ್ಟು ಏರಿಕೆಯಾಗುವ ಸಾಧ್ಯತೆ ಇದೆ’ ಎನ್ನುತ್ತಾರೆ ಕಲ್ಲಂಗಡಿ ಹಣ್ಣಿನ ವ್ಯಾಪಾರಿ ಇಮ್ರಾನ್‌. ಸೌತೆಕಾಯಿಗೂ ಬೇಡಿಕೆ ಬಂದಿದ್ದು, ವಾರದ ಹಿಂದೆ ಎರಡು ಸೌತೆಕಾಯಿ ₹ 10ಕ್ಕೆ ಮಾರಾಟ ಆಗುತ್ತಿದ್ದರೆ, ಈ ವಾರ ಒಂದಕ್ಕೆ ₹ 10 ದರ ಇತ್ತು.

ಜಿಲ್ಲೆಯ ಹೊಳೆನರಸೀಪುರ, ಅರಕಲ ಗೂಡು, ಹಳೇಬೀಡು, ಸೌದರ ಹಳ್ಳಿ, ಬೇಲೂರು, ಸಾಲಗಾಮೆ ಕಡೆ ಸೌತೆಕಾಯಿ ಬೆಳೆಯಲಾಗುತ್ತಿದ್ದು, ಮಾರುಕಟ್ಟೆಗೆ ಬರುತ್ತಿದೆ. ಬೇಸಿಗೆಯ ಬಿಸಿ ಏರಿಕೆಯಾಗುತ್ತಿರುವುದರಿಂದ ಸೌತೆ ಕಾಯಿಗೆ ಬೇಡಿಕೆ ಹೆಚ್ಚಾಗಿದೆ ಅರ್ಧದಷ್ಟು ಬೆಲೆ ಏರಿಕೆಯಾಗಿದೆ.

ಇನ್ನು ವಾರದ ಹಿಂದೆ ಒಂದು ಕೆ.ಜಿ. ₹ 25ಕ್ಕೆ ಮಾರಾಟವಾಗುತ್ತಿದ್ದ ಈರುಳ್ಳಿ, ಈ ವಾರ ₹ 5 ಏರಿದೆ. ಕೆ.ಜಿ.ಗೆ ₹ 30 ಇದ್ದ ಟೊಮೆಟೊ ಬೆಲೆ ಕಳೆದ ವಾರಕ್ಕಿಂತ ಕುಸಿತವಾಗಿದ್ದು, ಒಂದು ಕೆ.ಜಿ. ₹ 5ಕ್ಕೆ ಮಾರಾಟವಾಗುತ್ತಿದೆ.

ಕಳೆದ ವಾರ ಒಂದೂವರೆ ಕೆ.ಜಿ.ಗೆ ₹ 10ರಂತೆ ಮಾರಾಟವಾಗುತ್ತಿತ್ತು, ಹೆಚ್ಚಿನ ಪ್ರಮಾಣದಲ್ಲಿ ಟೊಮೆಟೊ ಮಾರುಕಟ್ಟೆಗೆ ಬರುತ್ತಿರುವುದರಿಂದ ಬೆಲೆ ಇಳಿಕೆಯಾಗಿದೆ ಎನ್ನುತ್ತಾರೆ ತರಕಾರಿ ವ್ಯಾಪಾರಿ ಪ್ರತಾಪ್‌.

ವಾರದ ಹಿಂದ ಒಂದು ಕೆ.ಜಿ. ₹ 20ಕ್ಕೆ ಮಾರಾಟವಾಗುತ್ತಿದ್ದ, ಬೀನ್ಸ್‌ ಈ ವಾರ ಏರಿಕೆಯಾಗಿದೆ. ಒಂದು ಕೆ.ಜಿ. ₹ 30ಕ್ಕೆ ಮಾರಾಟವಾಗುತ್ತಿದೆ. ವಾರದ ಹಿಂದ ಬಟಾಣಿ ಒಂದು ಕೆ.ಜಿ. ₹ 60ಕ್ಕೆ ಮಾರಾಟವಾಗುತ್ತಿದೆ.ಈ ವಾರ ಬೆಲೆ ಕುಸಿತವಾಗಿದ್ದು, ₹ 40ರಂತೆ ಮಾರಾಟವಾಗುತ್ತಿದೆ.

ಚನ್ನರಾಯಪಟ್ಟಣ ಮತ್ತು ಬೇಲೂರು ಭಾಗದಿಂದ ಹಾಸನ ಮಾರುಕಟ್ಟೆಗೆ ಬಟಾಣಿ ಬರುತ್ತಿದ್ದು, ಅಗತ್ಯಹಿಂತ ಹೆಚ್ಚು ಬರುತ್ತಿರುವುದೇ ಬೆಲೆ ಕುಸಿತಕ್ಕೆ ಕಾರಣವಾಗಿದೆ.

ಹೂಕೋಸು ₹ 20, ಬೂದುಗುಂಬಳ ಒಂದು ಕೆ.ಜಿ ₹ 20, ಒಂದು ಕೆ.ಜಿ ಎಲೆಕೋಸು ₹ 15, ಅವರೆಕಾಯಿ ಕೆ.ಜಿ.ಗೆ ₹ 40, ಕ್ಯಾರೆಟ್‌ ಒಂದು ಕೆ.ಜಿ ಗೆ ₹ 30, ಬೆಂಡೇಕಾಯಿ ಒಂದು ಕೆ.ಜಿ. ಗೆ ₹ 30, ಆಲೂಗೆಡ್ಡೆ ಒಂದು ಕೆ.ಜಿ.ಗೆ ₹ 20, ಬದನೆಕಾಯಿ ಒಂದು ಕೆ.ಜಿ.ಗೆ ₹ 20, ಒಂದು ಕೆ.ಜಿ. ಮೆಣಸಿನಕಾಯಿ ₹ 30, ಮೂಲಂಗಿ ಒಂದು ಕೆ.ಜಿ.ಗೆ ₹ 20, ನುಗ್ಗೆಕಾಯಿ ಒಂದು ಕೆ.ಜಿ.ಗೆ ₹ 50ರಂತೆ ಮಾರಾಟವಾದರೆ, ಕೊತ್ತಂಬರಿ, ಪಾಲಕ್, ಲಾಳಿ, ಕರಿಬೇವು ಮತ್ತು ದಂಟು ಸೊಪ್ಪು ಕಂತೆಗೆ ₹ 5 ರಂತೆ ಮಾರಾಟಮಾಡಲಾಗುತ್ತಿದೆ.

ಸಪೋಟ ಹಣ್ಣು ಒಂದು ಕೆ.ಜಿ. ₹ 60 ರಿಂದ 80, ಬಾಳೆಹಣ್ಣು ಒಂದು ಕೆ.ಜಿ.ಗೆ ₹ 60, ದ್ರಾಕ್ಷಿ ಒಂದು ಕೆ.ಜಿಗೆ ₹ 80, ಮೂಸಂಬೆ ಕೆಜಿ ಗೆ ₹ 80, ಸೇಬು ಕೆ.ಜಿ ಗೆ ₹ 100, ಸೀತಾಫಲ ಕೆ.ಜಿಗೆ ₹ 100, ಕಿತ್ತಳೆ ಹಣ್ಣು ಕೆ.ಜಿ. ₹ 80, ದಾಳಿಂಬೆ ಒಂದು ಕೆ.ಜಿ. ಗೆ ₹ 100, ಅನಾನಸ್‌ ಕೆ.ಜಿ.ಗೆ ₹ 100, ಪಪ್ಪಾಯ ಕೆ.ಜಿ ಗೆ ₹ 30 ಮಾರಾಟವಾಗುತ್ತಿತ್ತು.

ಪ್ರತಿಕ್ರಿಯಿಸಿ (+)