ಬೈರೂತ್ (ರಾಯಿಟರ್ಸ್): ಸಿರಿಯಾದ ಸರ್ಕಾರಿ ಬೆಂಬಲಿತ ಪಡೆಗಳು ಪೂರ್ವ ಗೊವುಟಾದ ಬಂಡುಕೋರರ ನೆಲೆಗಳ ಮೇಲೆ ನಡೆಸುತ್ತಿರುವ ದಾಳಿಯಲ್ಲಿ ಮೃತಪಟ್ಟವರ ಸಂಖ್ಯೆ 200ಕ್ಕೆ ಏರಿದೆ.

‘ಮಂಗಳವಾರ ನಡೆದ ದಾಳಿಯಲ್ಲಿ 49 ಮಂದಿ ಮೃತಪಟ್ಟಿದ್ದಾರೆ’ ಎಂದು ಮಾನವ ಹಕ್ಕುಗಳ ಸಂಘಟನೆಯೊಂದು ತಿಳಿಸಿದೆ.

‘ಸರ್ಕಾರಿ ಪಡೆಗಳ ದಾಳಿಗೆ ಪ್ರತಿಯಾಗಿ ಬಂಡುಕೋರರು ನಡೆಸಿದ ಶೆಲ್ ದಾಳಿಯಲ್ಲಿ ಇಬ್ಬರು ಮೃತಪಟ್ಟಿದ್ದಾರೆ ಮತ್ತು ಅನೇಕರು ಗಾಯಗೊಂಡಿದ್ದಾರೆ’ ಎಂದು ಸಿರಿಯಾದ ಸರ್ಕಾರಿ ಸ್ವಾಮ್ಯದ ಮಾಧ್ಯಮ ವರದಿ ಮಾಡಿದೆ.

200 ಸಾವು: ಡಮಾಸ್ಕಸ್ ಸುತ್ತಮುತ್ತಲ ಪ್ರದೇಶಗಳಲ್ಲಿ ಸಿರಿಯಾ ಪಡೆಗಳು ನಡೆಸಿದ ವೈಮಾನಿಕ ದಾಳಿ, ರಾಕೆಟ್ ಹಾಗೂ ಶೆಲ್ ದಾಳಿಯಲ್ಲಿ 20 ಮಕ್ಕಳೂ ಸೇರಿದಂತೆ 200 ಮಂದಿ ಮೃತಪಟ್ಟಿದ್ದಾರೆ ಎಂದು ಸಿರಿಯಾದಲ್ಲಿರುವ ಬ್ರಿಟನ್ ಮಾನವ ಹಕ್ಕುಗಳ ಸಂಸ್ಥೆ ತಿಳಿಸಿದೆ.

ಸದ್ಯ ಪರಿಸ್ಥಿತಿ ಕೈಮೀರುತ್ತಿದ್ದು, ತಕ್ಷಣವೇ ಕದನವಿರಾಮ ಘೋಷಿಸುವಂತೆ ವಿಶ್ವಸಂಸ್ಥೆ ಕರೆ ನೀಡಿದೆ.

‘ಬಾಂಬ್ ದಾಳಿಯಿಂದಾಗಿ ಪೂರ್ವ ಗೊವುಟಾದಲ್ಲಿರುವ ಐದು ಆಸ್ಪತ್ರೆಗಳಿಗೆ ಹಾನಿಯಾಗಿದೆ’ ಎಂದು ಸಿರಿಯಾದಲ್ಲಿರುವ ಆಸ್ಪತ್ರೆಗಳಿಗೆ ಹಣಕಾಸು ನೆರವು ಒದಗಿಸುತ್ತಿರುವ ಅಂತರರಾಷ್ಟ್ರೀಯ ಒಕ್ಕೂಟ ‘ದಿ ಯೂನಿಯನ್ ಆಫ್ ಮೆಡಿಕಲ್ ಕೇರ್ ಅಂಡ್ ರಿಲೀಫ್ ಆರ್ಗನೈಜೆಷನ್’ ತಿಳಿಸಿದೆ.

ಬಾಂಬ್ ದಾಳಿಯಲ್ಲಿ ಮಕ್ಕಳು ಮೃತಪಟ್ಟಿರುವುದಕ್ಕೆ ಜಿನೀವಾದಲ್ಲಿರುವ ವಿಶ್ವಸಂಸ್ಥೆ ಮಕ್ಕಳ ಹಣಕಾಸು ನಿಧಿ ಖಾಲಿ ಹಾಳೆಯ ಪ್ರಕಟಣೆ ಹೊರಡಿಸುವ ಮೂಲಕ ಆಕ್ರೋಶ ವ್ಯಕ್ತಪಡಿಸಿದೆ. ‘ಆ ಘಟನೆಯನ್ನು ಅಕ್ಷರಗಳಲ್ಲಿ ವಿವರಿಸುವುದಿಲ್ಲ’ ಎಂದು ತಿಳಿಸಿದೆ.

ತಮ್ಮ ವಿರುದ್ಧದ ಏಳು ವರ್ಷಗಳ ದಂಗೆಯನ್ನು ಕೊನೆಗಾಣಿಸಲು ಅಧ್ಯಕ್ಷ ಬಶರ್ ಅಲ್– ಅಸಾದ್ ನಿರ್ಧರಿಸಿದ್ದು, ಇದರ ಭಾಗವಾಗಿಯೇ ಗೊವುಟಾದಲ್ಲಿ ವಿವಿಧ ಪಡೆಗಳ ಮಧ್ಯೆ ದಾಳಿ–ಪ್ರತಿದಾಳಿ ತೀವ್ರಗೊಂಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.