ಓಜೋನ್ ಎಫ್‌ಸಿ ಚಾಂಪಿಯನ್‌

7

ಓಜೋನ್ ಎಫ್‌ಸಿ ಚಾಂಪಿಯನ್‌

Published:
Updated:

ಬೆಂಗಳೂರು: ಆಡಿದ ಹತ್ತು ಪಂದ್ಯಗಳಲ್ಲಿಯೂ  ಓಜೋನ್ ಫುಟ್‌ಬಾಲ್ ಕ್ಲಬ್ ತಂಡವು ಈ ಋತುವಿನ ಬಿಡಿಎಫ್‌ಎ ವತಿಯ ಸೂಪರ್ ಡಿವಿಷನ್ ಲೀಗ್ ಫುಟ್‌ಬಾಲ್ ಟೂರ್ನಿಯಲ್ಲಿ ಚಾಂಪಿಯನ್ ಆಗಿದೆ.

10 ಪಂದ್ಯಗಳಿಂದ ಈ ತಂಡ ಒಟ್ಟು 30 ಪಾಯಿಂಟ್ಸ್ ಪಡೆದುಕೊಂಡಿದೆ. ಗುರುವಾರ ಆಡಿದ ಅಂತಿಮ ಲೀಗ್ ಪಂದ್ಯದಲ್ಲಿ ಓಜೋನ್ ಎಫ್‌ಸಿ 1–0 ಗೋಲಿನಿಂದ ಬಿಎಫ್‌ಸಿ ತಂಡಕ್ಕೆ ಸೋಲುಣಿಸಿತು.

ಓಜೋನ್ ತಂಡದ ಆ್ಯಂಟೊ ಕ್ಸೇವಿಯರ್ 42ನೇ ನಿಮಿಷದಲ್ಲಿ ನೀಡಿದ ಅಪೂರ್ವ ಪಾಸ್‌ ನೆರವಿನಿಂದ ಅನೂಪ್‌ ಏಕೈಕ ಗೋಲು ತಂದುಕೊಟ್ಟರು. ಲೀಗ್ ಹಂತದ ಪಂದ್ಯಗಳು ಇನ್ನೂ ಬಾಕಿ ಇವೆ.

‘ಎ’ ಡಿವಿಷನ್ ಪಾಯಿಂಟ್ಸ್ ಪಟ್ಟಿಯಲ್ಲಿ ಬೆಂಗಳೂರು ಈಗಲ್ಸ್ ತಂಡ 19 ಪಾಯಿಂಟ್ಸ್‌ಗಳಿಂದ ಅಗ್ರಸ್ಥಾನದಲ್ಲಿದೆ. ಗುರುವಾರದ ಪಂದ್ಯದಲ್ಲಿ ಡಿವೈಇಎಸ್‌ ಎಫ್‌ಸಿ 2-1 ಗೋಲುಗಳಿಂದ ರಾಯಲ್ಸ್ ಎಫ್‌ಸಿ ಎದುರು ಗೆದ್ದಿದೆ.

ಡಿವೈಇಎಸ್‌ ತಂಡದ ಬಾಲಗಂಗಾಧರ 40 ಮತ್ತು 44ನೇ ನಿಮಿಷಗಳಲ್ಲಿ ಗೋಲು ತಂದಿತ್ತರು. ರಾಯಲ್ಸ್ ತಂಡದ ಯು.ಬಾಬು 75ನೇ ನಿಮಿಷದಲ್ಲಿ ಚೆಂಡನ್ನು ಗುರಿ ಸೇರಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry