ಸೆಮಿಫೈನಲ್‌ಗೆ ಮೇರಿ, ಸರಿತಾ

7

ಸೆಮಿಫೈನಲ್‌ಗೆ ಮೇರಿ, ಸರಿತಾ

Published:
Updated:

ಸೋಫಿಯಾ, ಬಲ್ಗೇರಿಯಾ (ಪಿಟಿಐ): ಭಾರತದ ಮೇರಿ ಕೋಮ್ ಮತ್ತು ಎಲ್‌.ಸರಿತಾ ದೇವಿ 69ನೇ ಸ್ಟ್ರಾಡ್ಜಾ ಸ್ಮಾರಕ ಬಾಕ್ಸಿಂಗ್ ಟೂರ್ನಿಯಲ್ಲಿ ಸೆಮಿಫೈನಲ್‌ ಪ್ರವೇಶಿಸಿದ್ದಾರೆ.

ಮೇರಿ ಕೋಮ್‌ ಅವರು ಮಹಿಳೆಯರ 48ಕೆ.ಜಿ ವಿಭಾಗದ ಕ್ವಾರ್ಟರ್‌ಫೈನಲ್ ಬೌಟ್‌ನಲ್ಲಿ ರುಮೇನಿಯಾದ ಸ್ಟೆಲುಟಾ ದತ್ತಾ ಎದುರು ಗೆದ್ದರು. ನಿಖರ ಹೊಡೆತಗಳಿಂದ ಗಮನ ಸೆಳೆದ ಮೇರಿ ಆರಂಭದಿಂದ ಅಂತಿಮ ಹಂತದವರೆಗೂ ಎದುರಾಳಿಗೆ ಮುನ್ನಡೆ ಸಾಧಿಸಲು ಅವಕಾಶ ನೀಡಲಿಲ್ಲ.

2006, 2008 ಮತ್ತು 2010ರ ವಿಶ್ವ ಚಾಂಪಿಯನ್‌ಷಿಪ್‌ ಫೈನಲ್‌ನಲ್ಲಿ ಸ್ಟೆಲುಟಾ ಅವರು ಮೇರಿ ಎದುರು ಸೋತಿದ್ದಾರೆ.

ಸರಿತಾ 60ಕೆ.ಜಿ ವಿಭಾಗದಲ್ಲಿ ಚೀನಾದ ಕ್ಯು ಯವೀನ್ ವಿರುದ್ಧ ಜಯಿಸಿದರು. ಪುರುಷರ ವಿಭಾಗದಲ್ಲಿ ಧೀರಜ್ ರಾಂಗಿ (64ಕೆ.ಜಿ) ಅವರು ಲೂಯಿಸ್‌ ಕಾಲಿನ್ ಎದುರು ಸೋತರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry