ಶಿಕ್ಷಕ ಬೈದರೆಂದು ಆತ್ಮಹತ್ಯೆ

7

ಶಿಕ್ಷಕ ಬೈದರೆಂದು ಆತ್ಮಹತ್ಯೆ

Published:
Updated:

ಮುಂಬೈ: ಶಾಲೆಯ ವಾರ್ಷಿಕೋತ್ಸವದ ಸಂದರ್ಭದಲ್ಲಿ ಚೆನ್ನಾಗಿ ಡ್ರೆಸ್‌ ಮಾಡಿಕೊಂಡು ಬರಲಿಲ್ಲ ಎಂಬ ಕಾರಣಕ್ಕೆ ಶಿಕ್ಷಕರು ಬೈದರೆಂದು 16ವರ್ಷದ ವಿದ್ಯಾರ್ಥಿಯೊಬ್ಬ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಮರಾಠವಾಡದ ಲಾತೂರ್‌ನಲ್ಲಿ ಇರುವ ’ಬಸವಣ್ಣವಾಲೆ ಇಂಗ್ಲಿಷ್‌ ಸ್ಕೂಲ್‌’ ಶಾಲೆಯ 10ನೇ ತರಗತಿ ವಿದ್ಯಾರ್ಥಿ ಅಮನ್‌ ಅಜಯ್‌ ಸಮದ್ರೆ ಮೃತ ವಿದ್ಯಾರ್ಥಿ.

‘ಎರಡು ದಿನಗಳ ದಿನ ನಡೆದ ವಾರ್ಷಿಕೋತ್ಸವದ ದಿನ ಅಮನ್‌ ಹಾಗೂ ನಾವೆಲ್ಲಾ ಕೇಸರಿ ಬಣ್ಣದ ಬಟ್ಟೆ ಧರಿಸಿದ್ದೆವು. ಸಮಾರಂಭ ಇರುವ ದಿನ ಇಂಥ ಬಟ್ಟೆ ಹಾಕಿಕೊಂಡು ಬರಬಾರದು ಎಂದು ಶಿಕ್ಷಕ  ಬೈದಿದ್ದರು. ಮಾರನೆಯ ದಿನ ಅಮನ್‌ನನ್ನು ಕರೆದ ಇದೇ ಶಿಕ್ಷಕ, ಚೆನ್ನಾಗಿ ಅಂಕ ಬರಬೇಕು ಎಂದರೆ ಹೀಗೆಲ್ಲಾ ಮಾಡಬಾರದು ಎಂದು ಮತ್ತೊಮ್ಮೆ ಬೈದಿದ್ದರು. ಇದರಿಂದ ಅಮನ್‌ ತುಂಬಾ ನೊಂದುಕೊಂಡಿದ್ದ’ ಎಂದು ಸ್ನೇಹಿತರು ಹೇಳಿದ್ದಾರೆ. ಪೊಲೀಸರು ದೂರು ದಾಖಲಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry